`ದೋನಿ ಪಡೆಯ ಸಾಧನೆಯೇ ಸ್ಫೂರ್ತಿ'

7

`ದೋನಿ ಪಡೆಯ ಸಾಧನೆಯೇ ಸ್ಫೂರ್ತಿ'

Published:
Updated:
`ದೋನಿ ಪಡೆಯ ಸಾಧನೆಯೇ ಸ್ಫೂರ್ತಿ'

ಬೆಂಗಳೂರು: `ಏಕದಿನ ವಿಶ್ವಕಪ್ ಗೆದ್ದ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡದ ಸಾಧನೆಯೇ ನಮಗೆ ಸ್ಫೂರ್ತಿ. ತವರು ನೆಲದಲ್ಲಿಯೇ  ವಿಶ್ವಕಪ್ ನಡೆಯಲಿರುವ ಕಾರಣ ಪ್ರಶಸ್ತಿ ಗೆಲ್ಲಬೇಕು ಎಂಬುದು ನಮ್ಮ ತಂಡದ ಕನಸು~ ಎಂದು ಭಾರತ ಅಂಧರ ತಂಡದ ನಾಯಕ ಶೇಖರ್ ನಾಯ್ಕ ಹೇಳಿದರು.

ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಆತಿಥೇಯ ತಂಡ ಭಾನುವಾರ ನಡೆಯುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎದುರು ಸೆಣಸಲಿದೆ.

`ದೋನಿ ಬಳಗ 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದೆ. ಅವರಂತೆಯೇ ನಾವೂ ವಿಶ್ವಕಪ್ ಗೆಲ್ಲಬೇಕು. ನಮ್ಮ ತಂಡದಲ್ಲಿ ಉತ್ತಮ ಆಲ್‌ರೌಂಡರ್‌ಗಳು ಇರುವುದರಿಂದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ~ ಎಂದು ಅವರು ನುಡಿದರು.

ಭಾನುವಾರದ ಪಂದ್ಯಗಳು:  ಭಾರತ-ಆಸ್ಟ್ರೇಲಿಯಾ (ಸೆಂಟ್ರಲ್ ಕಾಲೇಜು ಕ್ರೀಡಾಂಗಣ, ಬೆಳಿಗ್ಗೆ 9.30), ಪಾಕಿಸ್ತಾನ-ಇಂಗ್ಲೆಂಡ್ (ಆದಿತ್ಯ ಗ್ಲೋಬಲ್ ಶಾಲಾ ಮೈದಾನ, ನೆಲಮಂಗಲ, ಬೆ. 9.30), ಶ್ರೀಲಂಕಾ-ದಕ್ಷಿಣ ಆಫ್ರಿಕಾ (ಸೆಂಟ್ರಲ್ ಕಾಲೇಜು, ಮಧ್ಯಾಹ್ನ 1.30ಕ್ಕೆ) ಮತ್ತು ಬಾಂಗ್ಲಾದೇಶ-ನೇಪಾಳ (ಆದಿತ್ಯ ಗ್ಲೋಬಲ್, ಮ. 1.30).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry