`ದೋನಿ ರನ್‌ಔಟ್ ಫಲಿತಾಂಶ ಬದಲಾಯಿಸಬಹುದು'

7

`ದೋನಿ ರನ್‌ಔಟ್ ಫಲಿತಾಂಶ ಬದಲಾಯಿಸಬಹುದು'

Published:
Updated:

ನಾಗಪುರ: `ಕೊಹ್ಲಿ ಹಾಗೂ ದೋನಿ ಐದು ಗಂಟೆಗೂ ಹೆಚ್ಚು ಸಮಯ ಒಟ್ಟಿಗೆ ಆಡಿದ ರೀತಿ ಅದ್ಭುತ. ಏಕೆಂದರೆ ಈ ಪಿಚ್‌ನಲ್ಲಿ ಆ ರೀತಿ ಆಡುವುದು ಕಷ್ಟ. ಆದರೆ ನಾವು ವಿಶ್ವಾಸ ಕಳೆದುಕೊಳ್ಳಲಿಲ್ಲ. ಅದು ದಿನದಾಟದ ಅಂತ್ಯಕ್ಕೆ ಫಲ ನೀಡಿತು' ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಜೊನಾಥನ್ ಟ್ರಾಟ್ ನುಡಿದರು.`ಕೊಹ್ಲಿ ಹಾಗೂ ದೋನಿ ನಡುವಿನ ಜೊತೆಯಾಟ ಬೇರ್ಪಡಿಸಲು ತುಂಬಾ ಕಷ್ಟಪಡಬೇಕಾಯಿತು. ಆದರೆ ದಿನದಾಟ ಮುಗಿಯಲು ಕೆಲವೇ ನಿಮಿಷ ಇದ್ದಾಗ ದೋನಿ ಅವರನ್ನು ರನ್‌ಔಟ್ ಮಾಡಿದ್ದು ಪಂದ್ಯವನ್ನು ನಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಾಗಿದೆ. ಅವರ ರನ್‌ಔಟ್ ಈ ಪಂದ್ಯ ಗೆಲ್ಲಲು ನಮಗೆ ಸಹಾಯವಾಗಬಹುದು. ಜೊತೆಗೆ ಸರಣಿಯ ಫಲಿತಾಂಶ ಬದಲಾಯಿಸಬಹುದು ಎಂಬ ವಿಶ್ವಾಸ ನಮಗಿದೆ' ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry