ದೋನಿ ಹೇಳಿಕೆಗೆ ಕುಕ್ ಬೆಂಬಲ

7

ದೋನಿ ಹೇಳಿಕೆಗೆ ಕುಕ್ ಬೆಂಬಲ

Published:
Updated:

ಕೋಲ್ಕತ್ತ: ಪಿಚ್ ಸಂಬಂಧ ದೋನಿ ನೀಡಿರುವ ಹೇಳಿಕೆಗೆ ಎಲ್ಲಾ ಕಡೆಯಿಂದ ಟೀಕೆ ವ್ಯಕ್ತವಾಗುತ್ತಿರಬಹುದು. ಆದರೆ ಆ ಹೇಳಿಕೆಗೆ ಎದುರಾಳಿ ತಂಡದ ನಾಯಕ ಅಲಸ್ಟೇರ್ ಕುಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.`ಫಲಿತಾಂಶಕ್ಕೆ ಕಾರಣವಾಗದ ಪಿಚ್‌ಗಳನ್ನು ತಯಾರಿಸುವುದರಿಂದ ಪ್ರಯೋಜನವೇನು? ಭಾರತ ತಂಡದವರು ಸ್ವದೇಶದಲ್ಲಿ ಆಡುತ್ತಿರಬಹುದು. ಆದರೆ ತಿರುವು ನೀಡುವು ಪಿಚ್‌ಗಳು ಗೆಲ್ಲಲು ಉಭಯ ತಂಡಗಳಿಗೆ ಸಮನಾದ ಅವಕಾಶ ನೀಡುತ್ತವೆ' ಎಂದು ಇಂಗ್ಲೆಂಡ್ ತಂಡದ ಕುಕ್ ನುಡಿದರು.`ಮುಂಬೈನಲ್ಲಿ ಕೂಡ ತಿರುವು ನೀಡುವ ಪಿಚ್ ರೂಪಿಸಲಾಗಿತ್ತು. ಅದರಲ್ಲಿ ನಾವು ಗೆಲುವು ಸಾಧಿಸಲಿಲ್ಲವೇ? ಇದೇ ಪಿಚ್‌ನಲ್ಲಿ ಗೆಲ್ಲಲು ಭಾರತಕ್ಕೂ ಸಮನಾದ ಅವಕಾಶವಿತ್ತು' ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry