ದೋಳ್ಪಾಡಿ: ಗದ್ದೆಯಲ್ಲಿ ಒಂದು ದಿನ

7

ದೋಳ್ಪಾಡಿ: ಗದ್ದೆಯಲ್ಲಿ ಒಂದು ದಿನ

Published:
Updated:

ಸುಬ್ರಹ್ಮಣ್ಯ: ಸರ್ಕಾರಿ ಪ್ರೌಢಶಾಲೆ ದೋಳ್ಪಾಡಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಮಂಗಳ­ವಾರ ಪಿಜಕ್ಕಳ ಕೃಷಿಕರಾದ ಕೋಚಣ್ಣ ರೈ ಅವರ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಗಾಂಧೀಜಿ ಅವರ ಬುನಾದಿ ಶಿಕ್ಷಣವನ್ನು ನೆನಪಿಸುವ ಕಾರ್ಯದಲ್ಲಿ ತೊಡಗಿದರು.ಇಂದಿನ ಶಿಕ್ಷಣ ಪುಸ್ತಕದಲ್ಲಿ ಇರುವ ವಿಚಾರಗಳನ್ನು ಪರೀಕ್ಷೆ­ಯಲ್ಲಿ ಬರೆದು ಉತ್ತೀರ್ಣ­ರಾಗುವಂತೆ ಉತ್ತೀರ್ಣರಾಗುವಂತೆ ಶಿಕ್ಷಣ ಪದ್ಧತಿ ಆಗಿದೆ. ಮಕ್ಕಳಿಗೆ ಸ್ವತಃ ಬದುಕುವ ಸ್ವ ಉದ್ಯೋಗವನ್ನು ಮಾಡುವ ಶಿಕ್ಷಣ ಪದ್ಧತಿ ಇಲ್ಲ. ಇಂದು ನಿಜವಾಗಿ ಬೇಕಾದುದು ಜೀವನಕ್ಕೆ ದಾರಿ ನೀಡುವ ಶಿಕ್ಷಣ; ಅಂತಹ ಶಿಕ್ಷಣಕ್ಕೆ ಆಧ್ಯತೆ ನೀಡಿದರೆ ಒಳ್ಳೆಯದು ಎಂದು ಪಿಜಕ್ಕಳ ನಿವಾಸಿ ಕೃಷಿಕರಾದ ಕೋಚಣ್ಣ ರೈ ತಿಳಿಸಿದರು.ಸರ್ಕಾರಿ ಪ್ರೌಢಶಾಲೆ ದೋಳ್ಪಾಡಿ­ಯ ವಿದ್ಯಾರ್ಥಿಗಳು ಹಾಗೂ ಅಧ್ಯಾ­ಪಕ ವೃಂದದವರು ಗದ್ದೆಯಲ್ಲಿ ನೇಜಿ ನೆಟ್ಟು, ಬತ್ತದ ಕೃಷಿ ಯಾವ ರೀತಿ ಮಾಡುವುದು ಎಂಬುವುದರ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಭವಿಷ್ಯದಲ್ಲಿ ಭತ್ತದ ಕೃಷಿ ಯಾವ ರೀತಿ ಆಗುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಲಿಕ್ಕಿಲ್ಲ. ಆದುದರಿಂದ ಬತ್ತದ ಕೃಷಿಯ ಬಗ್ಗೆ ಗದ್ದೆಯಲ್ಲಿ ಪ್ರಾಯೋಗಿಕ ವೃತ್ತಿ ಶಿಕ್ಷಣ ನೀಡುತ್ತಿರುವುದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು  ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry