ಸೋಮವಾರ, ಏಪ್ರಿಲ್ 12, 2021
24 °C

ದೋಹಾ ಮಾತುಕತೆ: ವರ್ಷಾಂತ್ಯದಲ್ಲಿ ಕೊನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಮುಕ್ತ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ದೋಹಾ ಸುತ್ತಿನ ಸಂಧಾನ ಮಾತುಕತೆಗಳು ಈ ವರ್ಷಾಂತ್ಯಕ್ಕೆ ಮುಗಿಯಬಹುದು ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ-ಅಮೆರಿಕ ವಾಣಿಜ್ಯ ಮಾತುಕತೆಯ ಅಂಗವಾಗಿ, ಇಲ್ಲಿಗೆ ಆಗಮಿಸಿರುವ ಖುಲ್ಲರ್, ದೋಹಾ ಸುತ್ತಿನ ಮಾತುಕತೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಮುದಾಯ ಹಿಂದೆಂದೆಂದಿಗಿಂತಲೂ ಹೆಚ್ಚಿನ ಆಸಕ್ತಿಯನ್ನು ಇತ್ತೀಚೆಗೆ ತೋರಿಸುತ್ತಿದೆ ಎಂದರು. ದೋಹಾ ಸುತ್ತಿನ ಮಾತುಕತೆ ಈ ವರ್ಷಾಂತ್ಯದಲ್ಲಿ ಮುಗಿಯದಿದ್ದರೆ, ಮುಂಬರುವ ದಿನಗಳಲ್ಲಿ ಇದರಿಂದ  ಬಹುಪಕ್ಷೀಯ ವ್ಯಾಪಾರ ಸಂಸ್ಥೆಗಳು  ಗಂಡಾಂತರಕ್ಕೆ ಸಿಲುಕಲಿವೆ. ಇದು ವಿಶ್ವ ವಾಣಿಜ್ಯ ವಹಿವಾಟಿನ ಮೇಲೆ ಎಣಿಕೆಗೆ ನಿಲುಕದಷ್ಟು ಪರಿಣಾಮ ಬೀರಲಿದೆ ಎಂದರು.ದೋಹಾ ಸುತ್ತಿನ ಮಾತುಕತೆಯನ್ನು ಶೀಘ್ರದಲ್ಲೇ ಮುಗಿಸಲು ನಾವು ಬದ್ಧರಾಗಿದ್ದೇವೆ, ದೇಶಗಳ ನಡುವಿನ ವಾಣಿಜ್ಯ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದೂ ಖುಲ್ಲರ್ ಹೇಳಿದ್ದಾರೆ.ದೋಹಾ ಸುತ್ತಿನ ಮಾತುಕತೆಯ ಮೂಲಕ ದೇಶದೊಳಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಕೃಷಿ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಹಾಗೂ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತವೆ ಎನ್ನುವ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಾವು  ಈ ಕುರಿತು ಹೆಚ್ಚಿನ   ಕಾಳಜಿ ಹೊಂದಿದ್ದೇವೆ ಎಂದು ಖುಲ್ಲರ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.