ಗುರುವಾರ , ಮಾರ್ಚ್ 4, 2021
30 °C
ಕಾಮಾಜೆ ಸರ್ಕಾರಿ ಕಾಲೇಜು: ಮಾಧ್ಯಮ ಸಂವಾದದಲ್ಲಿ ಅಜಕ್ಕಳ ಗಿರೀಶ್‌ ಭಟ್‌

ದೌರ್ಜನ್ಯದಿಂದ ನೆಮ್ಮದಿ ಹಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೌರ್ಜನ್ಯದಿಂದ ನೆಮ್ಮದಿ ಹಾಳು

ಬಂಟ್ವಾಳ: ತಾಲ್ಲೂಕಿನ ಬ್ರೇಕ್ ಥ್ರೂ ಸಂಸ್ಥೆ ಮತ್ತು ಅರಿವು ಯುವ ಸಂವಾದ ಕೇಂದ್ರ ವತಿಯಿಂದ ಬಿ.ಸಿ.ರೋಡ್ ಸಮೀಪದ ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 'ಹಿಂಸೆ ಮುಕ್ತ ಗ್ರಾಮ ನಿರ್ಮಾಣದತ್ತ ನಮ್ಮ ಹೆಜ್ಜೆ' ಮಾಧ್ಯಮ ಸಂವಾದ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್  ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.ಪ್ರಾಂಶುಪಾಲ ಡಾ.ಅಜೆಕ್ಕಳ ಗಿರೀಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಟುಂಬಿಕ ಮತ್ತು ಸಾಮಾಜಿಕವಾಗಿ ಸ್ವಹಿತಕ್ಕಾಗಿ ಮಹಿಳಾ ದೌರ್ಜನ್ಯ ನಡೆಸಿದರೆ ಇದರಿಂದ ಪುರುಷ ರಲ್ಲಿ ಮಾನಸಿಕ ನೆಮ್ಮದಿಗೆ ಬದಲಾಗಿ ಅಶಾಂತಿ ನೆಲೆಸುತ್ತದೆ ಎಂದರು. ಬ್ರೇಕ್ ಥ್ರೂ ಸಂಸ್ಥೆ ರಾಜ್ಯ ಕಾರ್ಯಕ್ರಮ ಪ್ರಬಂಧಕಿ ಸುನೀಲ ಜಾರಂದಗುಡ್ಡೆ ತಮ್ಮ ಅನುಭವಗಳನ್ನು ಹೇಳಿಕೊಂಡರು. ಇದೇ ವೇಳೆ ಅರಿವು ನಿರ್ದೇಶಕ ನಾದ ಮಣಿನಾಲ್ಕೂರು ನೇತೃತ್ವದ ತಂಡವು 'ಹಿಂಸೆ ಮುಕ್ತ ಸಮಾಜ ನಿರ್ಮಾಣ ಹಾಗೂ ಹೆಣ್ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ತಡೆಗೆ ಪರಿಹಾರಕ್ಕಾಗಿ ಯುವ ಸಮುದಾಯ ಸಂಘಟಿತರಾಗುವಂತೆ ಜಾಗೃತಿ ಗೀತೆ ಹಾಡಿ ಗಮನ ಸೆಳೆದರು.ಮಾಧ್ಯಮ ಸಂವಾದ: ಈ ಬಗ್ಗೆ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ಮುರಳಿ, ಮೌನೇಶ್ ವಿಶ್ವಕರ್ಮ, ರಾಜಾ ಬಂಟ್ವಾಳ, ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ವಿಷ್ಣುಗುಪ್ತ ಪುಣಚ, ಮಹಮ್ಮದ್ ಆಲಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಬ್ರೇಕ್ ಥ್ರೂ ಸಂಸ್ಥೆ ತರಬೇತುದಾರೆ ಮಾರ್ಗರೇಟ್, ಕಾರ್ಯಕ್ರಮ ಸಂಯೋ ಜಕ ಬಿ.ಎಸ್.ಕರ್ಕೇರ ತೇಜಸ್ವಿನಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.