ಶನಿವಾರ, ನವೆಂಬರ್ 23, 2019
23 °C

ದೌರ್ಜನ್ಯ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:

ಗುಲ್ಬರ್ಗ: ಉದ್ಯೋಗ ಕೇಳಲು ಹೋದ ದಲಿತ ಯುವಕ ಸುಭಾಷ ಬೀಳಗಿ ಅವರ ಮೇಲೆ ಹಲ್ಲೆ ಮಾಡಿದ ಕಾರ್ಖಾನೆಯೊಂದರ ಅಧಿಕಾರಿಗಳನ್ನು ಬಂಧಿಸಬೇಕು ಎಂದು ದಲಿತ ಸೇನೆಯ ಗುಲ್ಬರ್ಗ ಘಟಕ ಒತ್ತಾಯಿಸಿದೆ.ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆ, ಸಕ್ಕರೆ ಕಾರ್ಖಾನೆಯೊಂದರ ಆಡಳಿತ ಮಂಡಳಿ ದಲಿತ ನೌಕರರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಕಾರ್ಖಾನೆಯಲ್ಲಿ ನಾಲ್ಕು ವರ್ಷದಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಾಲ್ಕೈದು ಪ್ರಕರಣಗಳು ದಾಖಲಾಗಿವೆ. ಆದರೆ ಸ್ಥಳೀಯ ಪೊಲೀಸರನ್ನು ಹಿಡಿತದಲ್ಲಿಟ್ಟುಕೊಂಡಿರುವ ಕಾರ್ಖಾನೆಯ ಆಡಳಿತ ಮಂಡಳಿ, ಕಾನೂನು ಕ್ರಮದಿಂದ ಪಾರಾಗಿದೆ ಎಂದು ತಿಳಿಸಿದೆ.ದೌರ್ಜನ್ಯ ಪ್ರಕರಣ ದಾಖಲು ಮಾಡಿದರೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸದ ಪೊಲೀಸರ ವಿರುದ್ಧ ಹಾಗೂ ದಲಿತ ವಿರೋಧಿ ಧೋರಣೆ ತಳೆದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹನುಮಂತ ಯಳಸಂಗಿ, ಗುಲ್ಬರ್ಗ ಘಟಕದ ಅಧ್ಯಕ್ಷ ನಾಗೇಂದ್ರ ಜವಳಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹ್ಮದ್ ಮೊಹಿನ್ ಸಾಬ್, ಉಪಾಧ್ಯಕ್ಷ ನಾಗಾರ್ಜುನ ದೊಡ್ಡಮನಿ ಹಾಗೂ ಮತ್ತಿತರರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)