ಗುರುವಾರ , ಮೇ 6, 2021
23 °C

ದೌರ್ಜನ್ಯ ನಾಚಿಕೆಗೇಡು: ಬಾಲಸುಬ್ರಹ್ಮಣ್ಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಉಡುಪಿ ಮತ್ತು ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ' ಎಂದು ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.

ಬೆಂಗಳೂರು ಫ್ರೀಮೇಸನ್ ಸೊಸೈಟಿಯು ಸೋಮವಾರ ನಗರದಲ್ಲಿ ಆಯೋಜಿಸಿದ್ದ ವಿಶ್ವ ಭ್ರಾತೃತ್ವ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಮಾಡುವ ಪ್ರತಿ ಸೇವೆಯು ಸಮಾಜದಲ್ಲಿನ ಅಶಕ್ತನ ಏಳಿಗೆಗೆ ಸಹಾಯವಾಗುತ್ತದೆ. ಇದು ನಿಜವಾದ ಸಹೋದರತ್ವ. ನಮ್ಮ ಸೇವೆಯಲ್ಲಿ ದೇವರಿದ್ದಾನೆ. ಸಮಾಜ ನಮಗೆ ನೀಡಿರುವುದನ್ನು ಸೇವೆಯ ಮುಖಾಂತರ ಹಿಂದಿರುಗಿಸಬೇಕು ಎಂದರು. ಬೆಂಗಳೂರು ಫ್ರೀಮೇಸನ್ ಸೊಸೈಟಿಯ ಪ್ರಾದೇಶಿಕ ಸಹಾಯಕ ಅಧಿಕಾರಿ ಉಜ್ವಲ್ ಎಂ.ಜೋಶಿ ಮಾತನಾಡಿ, `ಪ್ರತಿಯೊಬ್ಬರು ಒಂದಿಲ್ಲೊಂದು ರೀತಿಯಲ್ಲಿ ನಿಸರ್ಗದಿಂದ ಸಹಾಯವನ್ನು ಪಡೆದಿರುತ್ತಾರೆ. ಅದನ್ನು ಸೂಕ್ತ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತೀರಿಸುವ ಕೆಲಸ ಮಾಡಬೇಕು' ಎಂದು ಹೇಳಿದರು.ಅಂಗಾಂಗ ದಾನವು ಇಂದು ಅತ್ಯಂತ ಮಹತ್ವವಾಗಿದೆ. ನಾವು ಅಳಿದ ನಂತರ ನಮ್ಮ ದೇಹವು ವ್ಯರ್ಥವಾಗಿ ಮಣ್ಣು ಸೇರುತ್ತದೆ. ಅದರ ಬದಲು ಅಂಗಾಂಗ ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಮರುಜನ್ಮ ನೀಡಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.