ದೌರ್ಜನ್ಯ: ಪಿಎಸ್‌ಐ ಅಮಾನತಿಗೆ ಒತ್ತಾಯ

7

ದೌರ್ಜನ್ಯ: ಪಿಎಸ್‌ಐ ಅಮಾನತಿಗೆ ಒತ್ತಾಯ

Published:
Updated:

ಗುಲ್ಬರ್ಗ: ಜಿಲ್ಲೆಯ ಆಳಂದ ತಾಲ್ಲೂಕಿನ ಕೋತನಹಿಪ್ಪರಗಾ ಗ್ರಾಮದ ಅಮಾಯಕ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ತನಿಖೆ ನಡೆಸದೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಪಿಎಸ್‌ಐ ವಿಜಯಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ದಲಿತ ಸಮನ್ವಯ ಸಮಿತಿ ಸದಸ್ಯರು ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಮಹಮ್ಮದ್ ವಜೀರ್ ಅಹಮದ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ಜಗತ್ ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಎಲ್ಲಾ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದು ಕೋತನಹಿಪ್ಪರಗಾ ಗ್ರಾಮವನ್ನು ದೌರ್ಜನ್ಯಪೀಡಿತ ಗ್ರಾಮ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಇಲ್ಲಿಯವರೆಗೂ ಗ್ರಾಮದ ದಲಿತರ ಮೇಲೆ 22 ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.ಮಾಪಣ್ಣ ಗಂಜಗೇರಿ, ಪ್ರಕಾಶ ಮೂಲಭಾರತಿ, ಎ.ಬಿ. ಹೊಸಮನಿ, ಸೂರ್ಯಕಾಂತ ನಿಂಬಾಳಕರ, ಭೀಮರಾವ ಟಿ.ಟಿ., ಶಿವಕುಮಾರ ದೊಡ್ಡಮನಿ, ಬಾಬು ಒಂಟಿ, ದಿಗಂಬರರಾವ ಬೆಳಮಗಿ, ದಶರಥ ಕಲಗುರ್ತಿ, ಶೇಖರ್ ಹುಸೇನ್ ಬಾಬಾ, ರಾಜು ಸಂಕಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry