ಗುರುವಾರ , ಜೂನ್ 24, 2021
30 °C

ದೌರ್ಜನ್ಯ ಹೆಚ್ಚಲು ಮಾಧ್ಯಮಗಳು ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾಧ್ಯಮಗಳಲ್ಲಿ ಬಿಂಬಿಸ ಲಾಗುವ ಅಶ್ಲೀಲತೆಯೇ ಮಹಿಳೆ ಯರ ಮೇಲಿನ ದೌರ್ಜನ್ಯ ಹೆಚ್ಚಲು ಕಾರಣ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇ ಷನ್‌ನ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ ಆರೋಪಿಸಿದರು.ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಮಿತಿ ಗುರುವಾರ ಎಸ್‌ಡಿಎಂ ಮತ್ತು ಎಂಎಂಕೆ ಮಹಿಳಾ ಪದವಿ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಏರ್ಪ ಡಿಸಿದ್ದ `ಮಾಧ್ಯಮಗಳಲ್ಲಿ ಹೆಚ್ಚುತ್ತಿ ರುವ ಅಶ್ಲೀಲತೆ ಹಾಗೂ ಮಹಿಳೆಯರ ಮೇಲಿನ ಅಪರಾಧ ಗಳು~ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೆಲವು ಬಾರಿ ಸಭ್ಯ ಮನಸ್ಸುಗಳಿಗೆ ಉಸಿರಾಡುವ ಗಾಳಿಯೂ ವಿಷಪೂ ರಿತ ಎನಿಸುವಷ್ಟು ಸಂಕಟವಾಗುತ್ತದೆ. ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಅಶ್ಲೀಲತೆಯೇ ಆ ವಿಷ ಎಂದರು.ಅಮೆರಿಕ, ಚಿಕಾಗೋ ಮೊದಲಾ ದೆಡೆ ಮಹಿಳಾ ದೌರ್ಜನ್ಯ ವಿರೋಧಿಸಿ ನಡೆದ ಹೋರಾಟಗಳ ಕುರಿತು ವಿವರ ನೀಡಿದರು. ಸಿನಿಮಾ, ಜಾಹೀರಾತು ಮುಂತಾದ ಪ್ರಸಾರ ಮಾಧ್ಯಮಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವಾಗಿ ಚಿತ್ರಿಸಲಾಗುತ್ತಿದೆ. ಕ್ರೌರ್ಯ, ಲೈಂಗಿಕ ವಿಷಯಗಳ ವೈಭವೀಕರಣ ನಡೆಯುತ್ತಿದೆ.ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ಚಿತ್ರಿಸುವುದು ಅಪರಾಧ ಎಂದು ತಿಳಿದಿದ್ದರೂ ಹಣ ಸಂಪಾದನೆ, ಸ್ವಾರ್ಥ ಸಾಧನೆಗೆ ಈ ರೀತಿ ವರ್ತಿಸ ಲಾಗುತ್ತಿದೆ. 19ನೇ ಶತಮಾನದಲ್ಲಿ ಮಹಿಳಾ ದೌರ್ಜನ್ಯ ವಿರೋಧಿಸಿ ಆರಂಭಿಸಲಾದ ಹೋರಾಟಗ ಳಂತೆಯೇ ಈಗಲೂ ಆ ರೀತಿಯ ಹೋರಾಟ ನಡೆಸಲು ಪಣ ತೊಡಬೇಕಿದೆ ಎಂದರು.   ಕರ್ನಾಟಕದಲ್ಲಿ ಪ್ರತಿ ತಿಂಗಳು 8 ಅತ್ಯಾಚಾರ ಪ್ರಕರಣ ದಾಖಲಾಗು ತ್ತಿವೆ. ಅಂತರ್ಜಾಲದಿಂದ ಅಶ್ಲೀಲ ದೃಶ್ಯಗಳನ್ನು ಒಳಗೊಂಡ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಕೊಳ್ಳುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಶೇ 48ರಷ್ಟು ಹುಡುಗರು ಈ ಕೃತ್ಯದಲ್ಲಿ ತೊಡಗಿದರೆ, ಹುಡುಗಿಯರ ಪಾಲು ಶೇ 22ರಷ್ಟಿದೆ. ಸಾಹಿತ್ಯ, ಕಲೆ ಇತ್ಯಾದಿ ಉತ್ತಮ ಚಟುವಟಿಕೆಗಳಿಂದ ದೂರ ಉಳಿದಿದ್ದೇ ಇಂತಹ ಅನಾಹುತಕ್ಕೆ ಕಾರಣ ಎಂದರು.ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸಂಧ್ಯಾ ಪಿ.ಎಸ್. ಮಾತನಾಡಿ ದರು. ಪ್ರಾಂಶುಪಾಲ ಪ್ರೊ.ಎಂ. ಬಾಲಚಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಎಐಎಂಎಸ್‌ಎಸ್ ಜಿಲ್ಲಾ ಸಮಿತಿ ಸದಸ್ಯೆ ನಳಿನಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.