ಶನಿವಾರ, ಮೇ 15, 2021
22 °C

ದ್ರಾಕ್ಷಿ ಬೆಲೆ ಕುಸಿತ: ಬೆಳೆಗಾರರು ಕಂಗಾಲು

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸುಡು ಬಿಸಿಲು ಮತ್ತು ಬದುಕನ್ನೇ ಬರಿದಾಗಿಸಿರುವ ಬರಗಾಲದಿಂದ ಕಂಗೆಟ್ಟಿರುವ ದ್ರಾಕ್ಷಿ ಬೆಳೆಗಾರರು ಮತ್ತೊಂದು ಸಂಕಷ್ಟಕ್ಕೀಡಾಗಿದ್ದಾರೆ.ದ್ರಾಕ್ಷಿ ಬೆಲೆ ಅರ್ಧದಷ್ಟು ಕುಸಿದಿದ್ದು, ಭಾರಿ ಪ್ರಮಾಣದ ಆರ್ಥಿಕ ನಷ್ಟಕ್ಕೆ ತುತ್ತಾಗುವ ಭೀತಿಯನ್ನು ದ್ರಾಕಿ ಬೆಳೆಗಾರರು ಎದುರಿಸುತ್ತಿದ್ದಾರೆ. ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಕಟಾವು ಮಾಡಲಾಗದೆ ಪರಿತಪಿಸುತ್ತಿದ್ದಾರೆ.ತಾಲ್ಲೂಕಿನಲ್ಲಿ ಹೈನುಗಾರಿಕೆ, ರೇಷ್ಮೆ ಹೊರತುಪಡಿಸಿದರೆ ಬಹುತೇಕ ರೈತರು ದ್ರಾಕ್ಷಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಕೆಲ ರೈತರು 8ರಿಂದ 10 ಎಕರೆಯಷ್ಟು ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆದಿದ್ದರೆ, ಇನ್ನೂ ಕೆಲ ರೈತರು ಒಂದು ಅಥವಾ ಅರ್ಧ ಎಕರೆಯಷ್ಟು ಜಮೀನಿನಲ್ಲಿ ಬೆಳೆದಿದ್ದಾರೆ.

 

ತಾಲ್ಲೂಕಿನ ಹುನೇಗಲ್ಲು, ನಾಯನಹಳ್ಳಿ, ಪಟ್ರೇನಹಳ್ಳಿ, ಶ್ರೀರಾಮಪುರ, ತೌಡನಹಳ್ಳಿ, ಕೊಳವನಹಳ್ಳಿ, ಡಿ.ಹೊಸೂರು, ಯಲುವಹಳ್ಳಿ, ದೊಡ್ಡಮರಳಿ, ಬೀಡಗಾನಹಳ್ಳಿ, ಕೊತ್ತನೂರು, ಚದಲಪುರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ.ಸುಡು ಬಿಸಿಲಿನಲ್ಲಿ ಈ ಎಲ್ಲ ಗ್ರಾಮಗಳಲ್ಲಿ ಒಂದು ಸುತ್ತು ಹಾಕಿದರೆ ಸಾಕು, ತೋಟಗಳಲ್ಲಿ ದ್ರಾಕ್ಷಿ ಗೊಂಚಲುಗಳು ಕಾಣಸಿಗುತ್ತವೆ. ದ್ರಾಕ್ಷಿ ಕಟಾವು ಆಗಿಲ್ಲವೆಂದು ಪ್ರಶ್ನಿಸಿದರೆ, `ಕಷ್ಟಪಟ್ಟು ಸಾಲಸೋಲ ಮಾಡಿಕೊಂಡು ಬೆಳೆದ ಬೆಳೆಗೆ ಬೆಲೆಯೇ ಇಲ್ಲದಿರುವಾಗ ಕಟಾವು ಮಾಡಿದರೇನೂ, ಬಿಟ್ಟರೇನು. ಬಿರು ಬಿಸಿಲಿನಲ್ಲೇ ಒಂದು ವೇಳೆ ಮಳೆಯಾಗಿಬಿಟ್ಟರೆ, ದ್ರಾಕ್ಷಿ ಗೊಂಚಲು ಉದುರುತ್ತದೆ. ಇಡೀ ಬೆಳೆ ನೆಲ ಕಚ್ಚುತ್ತದೆ~ ಎಂದು ರೈತರು ನೊಂದು ನುಡಿಯುತ್ತಾರೆ.`ಒಂದು ವಾರದ ಹಿಂದೆಯಷ್ಟೇ ಕೆ.ಜಿ.ಗೆ 30ರಿಂದ 40 ರೂಪಾಯಿಯಂತೆ ಮಾರುತ್ತಿದ್ದೆವು. ಆದರೆ ಈಗ ಬೆಲೆ ದಿಢೀರ್ ರೂ. 13ಕ್ಕೆ ಕುಸಿದಿದೆ. ಈ ಪರಿ ಬೆಲೆ ಕುಸಿದರೆ, ನಮ್ಮ ಕೈಗೆ ಏನೂ ಗಿಟ್ಟಲ್ಲ. ಸಾಲದ ಬಡ್ಡಿಯಲ್ಲ, ಅಸಲು ಸಾಲವನ್ನೇ ತೀರಿಸಲಾಗದೆ ಸಂಕಷ್ಟಕ್ಕೀಡಾಗುತ್ತೇವೆ.ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು 6 ತಿಂಗಳು ಕಾಲ ಔಷಧಿ ಹಾಕಿ, ಕಾವಲು ಕಾಯ್ದು, ಸಂರಕ್ಷಿಸಿ ಬೆಳೆಸಿ ಕಷ್ಟಪಡುತ್ತೇವೆ. ಆದರೆ ಇನ್ನೇನೂ ಫಸಲು ಬಂತು ಎನ್ನುವಾಗ ಬೆಲೆ ಕುಸಿದರೆ, ನಮ್ಮ ಸ್ಥಿತಿ ಏನಾಗಬೇಡ~ ಎಂದು ಶ್ರೀರಾಮಪುರ ರೈತ ಎಸ್.ನಾರಾಯಣಸ್ವಾಮಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.