ದ್ರಾವಿಡ್‌ಗೆ ಸಂಜು ಕುಟುಂಬದ ಕೃತಜ್ಞತೆ

7

ದ್ರಾವಿಡ್‌ಗೆ ಸಂಜು ಕುಟುಂಬದ ಕೃತಜ್ಞತೆ

Published:
Updated:

ತಿರುವನಂತಪುರಂ (ಐಎಎನ್‌ಎಸ್): ‘ನಮ್ಮ ಪುತ್ರ ಸಂಜು ಸ್ಯಾಮ್ಸನ್‌ನ ಕ್ರಿಕೆಟ್‌ ಬದುಕನ್ನು ರೂಪಿಸಿದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ಗೆ ನಾವು ಚಿರಋಣಿಯಾಗಿರುತ್ತೇವೆ’ ಎಂದು ಸ್ಯಾಮ್ಸನ್‌ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಹೇಳಿದ್ದಾರೆ.‘ಪಂದ್ಯಗಳ ವೇಳೆ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಲು ಎಲ್ಲಾ ಬಗೆಯಲ್ಲೂ ಸ್ಯಾಮ್ಸನ್‌ಗೆ ಹುರಿದುಂಬಿಸಿದವರು ದ್ರಾವಿಡ್‌. ಅವರಿಗೆ ನಮ್ಮ ಕುಟುಂಬದ ಎಲ್ಲರೂ  ಕೃತಜ್ಞರಾಗಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಪರ ಆಡಿದ್ದು ತಮ್ಮ ಪುತ್ರನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಐಪಿಎಲ್‌ ವೇಳೆ  ತಂಡದಲ್ಲಿ ಆಡಲು ಅವಕಾಶ ನೀಡಿ ಅವನಲ್ಲಿ ಅಡಗಿದ್ದ ಪ್ರತಿಭೆಯನ್ನು ಪ್ರದರ್ಶಿಸಲು ಸಹಕರಿಸಿದ್ದು  ದ್ರಾವಿಡ್‌ ಎಂದೂ ಅವರು ನುಡಿದಿದ್ದಾರೆ.ಸ್ಯಾಮ್ಸನ್ ಶನಿವಾರ ನಡೆದ 19 ವರ್ಷದೊಳಗಿನವರ  ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 87 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದ್ದರು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry