ದ್ರೋಹಿಗಳಿಗೆ ಮತ್ತೆ ಅವಕಾಶ ಬೇಡ

ಮಂಗಳವಾರ, ಮೇ 21, 2019
23 °C

ದ್ರೋಹಿಗಳಿಗೆ ಮತ್ತೆ ಅವಕಾಶ ಬೇಡ

Published:
Updated:

ಕಾರಟಗಿ: ಪಕ್ಷೇತರ ಅಭ್ಯರ್ಥಿಯಾಗಿ ನಮ್ಮೆಲ್ಲರ ಸಹಕಾರದಿಂದ ಶಾಸಕರಾದ, ಸರ್ಕಾರವನ್ನು ಬೆಂಬಲಿಸಿ ಎರಡು ಪ್ರಭಾವಿ ಖಾತೆ ಹೊಂದಿ, ದುರಾಸೆಯಿಂದ ಬಂಡಾಯವೆದ್ದು ಪಕ್ಷಕ್ಕೆ ದ್ರೋಹ ಮಾಡಿದ, ಪಕ್ಷದ ನಾಯಕರನ್ನು ಹಾಗೂ ಸರ್ಕಾರವನ್ನು ಹಿಗ್ಗಾ, ಮುಗ್ಗಾ ತರಾಟೆಗೆ ತಗೆದುಕೊಂಡವರನ್ನು ಮತ್ತೆ ಪಕ್ಷಕ್ಕೆ                              ಸೇರಿಸಿದರೆ ಸಹಿಸಲಾಗದು, ಹೊರಗಿನವರನ್ನು ನಮ್ಮ ಮೇಲೆ ಹೇರಬೇಡಿರಿ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಸತ್ಯನಾರಾಯಣ ದೇಶಪಾಂಡೆ  ಹೇಳಿದರು.ಇಲ್ಲಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬ್ಲಾಕ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ   ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರನ್ನು ಜಿಲ್ಲಾ, ತಾಲ್ಲೂಕು ಪಂಚಾಯಿತಿ                     ಚುನಾವಣೆಯಲ್ಲಿ ಸೋಲಿಸಲು ಸೆಡ್ಡು ಹೊಡೆದವರನ್ನು, ಪಕ್ಷದ ನಾಯಕರನ್ನು ಸದ್ದಾಂ ಹುಸೇನ್ ಎಂದು ಜರಿದ, ಸರ್ಕಾರದ ಆಡಳಿತವನ್ನು ಸದಾ ಟೀಕಿಸುತ್ತಲೆ ಇರುವವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಯತ್ನ, ವದಂತಿ ಹರಡಿ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಅವರ ಮನದಾಳದ ಮಾತಿಗೆ ಸ್ಪಂದಿಸಿ, ನಿರ್ಧಾರಕ್ಕೆ ಬರಬೇಕು. ಇದಕ್ಕೆ ವ್ಯತಿರಿಕ್ತವಾದರೆ ನಾವು ಸಹಿಸುವುದಿಲ್ಲ ಎಂದರು.ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ ಕೆಲ ಘಟನೆಗಳಲ್ಲಿ ಕೆಲ ಮಾತುಗಳು ಸಹಜ. ಕಾರ್ಯಕರ್ತರು ಅದನ್ನು ಗಣನೆಗೆ ತಗೆದುಕೊಳ್ಳದಿರಲಿ.ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಆಡಳಿತಕ್ಕೆ ಬರಲು ಸಾಧ್ಯವಾಗಿದೆ. ನಿಮ್ಮ ಭಾವನೆಯನ್ನು ಪಕ್ಷದ ಮುಖಂಡರಲ್ಲಿ ತಲುಪಿಸುವೆನು. ನಿಮ್ಮ ಭಾವನೆಗೆ ವಿರೋಧವಾಗಿ ಯಾವುದೇ ತೀರ್ಮಾನಗಳಾಗುವುದಿಲ್ಲ ಎಂದರು.

ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಿಂದಿನ ವೇದಿಕೆಯಲ್ಲಿ ಶಾಸಕರನ್ನು ಹೊಗಳಿದ್ದಕ್ಕೆ ಅಪಾರ್ಥ ಬೇಡ. ನಿಮ್ಮ ಭಾವನೆ, ತೀರ್ಮಾನಕ್ಕೆಧಕ್ಕೆಯಾಗದ ರೀತಿಯಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಇಲ್ಲಿಯ ಘಟನೆ ನೋಡಿದರೆ ಮೊದಲು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡೇ  ಇತರ ಕಾರ್ಯಕ್ರಮಗಳಿಗೆ ತೆರಳಬೇಕು ಎಂಬ ಪಾಠ ಕಲಿತಂತಾಗಿದೆ  ಎಂದರು.ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್, ಸಂಸದ ಶಿವರಾಮಗೌಡ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಶಾಸಕ  ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ಯ ಮಾತನಾಡಿ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ, ಅವರ ನಿರ್ಧಾರ ಧಿಕ್ಕರಿಸಿ ಯಾವುದೇ ನಿರ್ಧಾರ ಕೈಗೊಳ್ಳಲಾಗದು, ನಿಮ್ಮಂದಿಗೆ ನಾವಿದ್ದೇವೆ ಎಂದರು.ಬಿಜೆಪಿ ಜಿಲಾಧ್ಯಕ್ಷ ಗಿರೇಗೌಡ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಜಿಪಂ ಅಧ್ಯಕ್ಷೆ ಜ್ಯೋತಿ ನಾಗರಾಜ್                      ಬಿಲ್ಗಾರ್, ವಿಶೇಷ ಎಪಿಎಂಸಿ ಅದ್ಯಕ್ಷ ಬಿ. ಜಿ. ಅರಳಿ, ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ  ತಿಪ್ಪೇರುದ್ರಸ್ವಾಮಿ ವಕೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶೇಷಗಿರಿವಾರ್, ಬ್ಲಾಕ್ ಅಧ್ಯಕ್ಷ ಗುರುಸಿದ್ದಪ್ಪ ಎರಕಲ್, ಜಿಪಂ ಸದಸ್ಯ ಅಮರೇಶ್ ಕುಳಗಿ, ಮನೋಹರ, ಗುರುರಾಜ್, ರಾಘವೇಂದ್ರ ದೇಸಾಯಿ, ವಿರುಪಣ್ಣ ಕಲ್ಲೂರ, ಬಾಲಪ್ಪ ಆರಾಪೂರ ಪ್ರಮುಖರಾದ ಬಸವರಾಜಪ್ಪ ದಡೇಸ್ಗೂರ, ನಾಗರಾಜ್ ಬಿಲ್ಗಾರ್, ಪದ್ಮಾವತಿ ಕೊತ್ತಪಲ್ಲಿ,  ಗಿರಿಜಮ್ಮ ಮರೇಗೌಡ ಮಾಲಿಪಾಟೀಲ್ ಮೊದಲಾದವರು ವೇದಿಕೆಯಲ್ಲಿ       ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry