ದ್ವಂದ್ವಗಳ ತುಗ್ಲಕ್ 10ಕ್ಕೆ ತೆರೆಗೆ

7

ದ್ವಂದ್ವಗಳ ತುಗ್ಲಕ್ 10ಕ್ಕೆ ತೆರೆಗೆ

Published:
Updated:

ಹುಬ್ಬಳ್ಳಿ: ಜನರ ಮನದಲ್ಲಿನ ದ್ವಂದ್ವಗಳ ಬಗ್ಗೆ ಕಥೆಯನ್ನು ಹೊಂದಿದ ರಕ್ಷಿತ್ ಶೆಟ್ಟಿ ನಾಯಕ ನಟರಾಗಿರುವ `ತುಗ್ಲಕ್~ ಕನ್ನಡ ಚಿತ್ರ ಫೆ.10ರಂದು ರಾಜ್ಯದ 18ರಿಂದ 20 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.`ಸಾಮಾನ್ಯರ ಮನದಲ್ಲಿ ಮೂಡುವ ಗೊಂದಲಗಳನ್ನೇ ಎಳೆಯಾಗಿಟ್ಟುಕೊಂಡು ಈ ಚಿತ್ರವನ್ನು ತಯಾರಿಸಲಾಗಿದ್ದು, ಕನ್ನಡ ಚಿತ್ರರಂಗ ಜೋತುಬಿದ್ದಿರುವ ಆ್ಯಕ್ಷನ್, ಪ್ರೀತಿ, ಹಾಸ್ಯದ ಕಥೆಯನ್ನೂ ಮೀರಿದ, ಕ್ಲೈಮ್ಯಾಕ್ಸ್ ಮುಖ್ಯವಲ್ಲದ ಚಿತ್ರ ಇದಾಗಿದೆ~ ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 `ಚಿತ್ರದ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಕೈಗೊಂಡಿದ್ದು, ಪತ್ರಿಕೆಗಳಿಗೆ ನೀಡಲಾದ ಜಾಹೀರಾತಿನಲ್ಲಿ ಮೊಬೈಲ್ ಸಂಖ್ಯೆ ಕೊಟ್ಟು ಪ್ರೇಕ್ಷಕರಿಗೆ ಕರೆ ಮಾಡಲು ಹೇಳಲಾಗಿತ್ತು. ರಾಜ್ಯದಾದ್ಯಂತ ಸುಮಾರು 250ಕ್ಕೂ ಅಧಿಕ ಪ್ರೇಕ್ಷಕರು ದೂರವಾಣಿ ಕರೆ ಮಾಡಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರನ್ನು ಬೆಂಗಳೂರಿಗೆ ಆಹ್ವಾನಿಸಿ ಅಲ್ಲಿ ಸಿನಿಮಾ ತೋರಿಸಲಾಗಿದೆ.ಶೇ 75ರಷ್ಟು ಮಂದಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕ ರಕ್ಷಿತ್ ಶೆಟ್ಟಿ ನಾಯಕಿ ಮೇಘನಾ ಗಾಂವ್ಕರ್ ಅವರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ~ ಎಂದು ನಿರ್ದೇಶಕರು ಬೆಸ್ಟ್ ಸರ್ಟಿಫಿಕೇಟ್ ನೀಡಿದರು!ಚಿತ್ರದ ಪ್ರಚಾರಕ್ಕಾಗಿ ಹುಬ್ಬಳ್ಳಿಯಲ್ಲಿ ಆಟೊ ರ‌್ಯಾಲಿಯನ್ನು ಮಾಡಲಾಗಿದೆ ಎಂದೂ ಅವರು ನುಡಿದರು.ಚಿತ್ರನಟ ರಕ್ಷಿತ್ ಶೆಟ್ಟಿ, `ಚಿತ್ರದಲ್ಲಿ ರಾಘು ಎಂಬ ಹೆಸರಿನಲ್ಲಿ ನಟಿಸಿದ್ದು, ರಾಘು ಯಾವಾಗಲೂ ಗೊಂದಲದ ಗೂಡಾಗಿರುತ್ತಾನೆ. ಕಾಫಿ ಕುಡಿಬೇಕಾ? ಚಹಾ ಕುಡಿಯಬೇಕಾ? ಎಂಬುದೂ ಸೇರಿದಂತೆ ನಿತ್ಯವೂ ಎದುರಾಗುವ ಹಲವು ಗೊಂದಲಗಳನ್ನು ಎದುರಿಸುತ್ತಾನೆ. ಚಿತ್ರದ ಮೊದಲರ್ಧ ಸಿನಿಮಾ ಥರ ಇದ್ದರೆ, ನಂತರದ್ದು ಜೀವನದಂತಿದೆ~ ಎಂದು ಹೇಳಿದರು.ಈ ಚಿತ್ರದ ಸೋನಿಯಾ ಪಾತ್ರದಲ್ಲಿ ನಟಿಸಿರುವ ಮೇಘನಾ ಗಾಂವ್ಕರ್ ಮಾತನಾಡಿ, `ನನ್ನ ಪಾತ್ರ ಬಂಡಾಯ ಪ್ರವೃತ್ತಿಯದ್ದಾಗಿದ್ದು, ಮೊದಲು ನಾನು ನಟಿಸಿದ ಪಾತ್ರಕ್ಕಿಂತಲೂ ಇದು ವಿಭಿನ್ನವಾಗಿದೆ. ನನ್ನಲ್ಲೂ ತುಗ್ಲಕ್‌ನ ಗುಣಗಳಿವೆ ಎಂಬುದೇ ಈ ಪಾತ್ರವೇ ತಿಳಿಸುತ್ತದೆ~ ಎಂದು ಹೇಳಿದರು.

ಚಿತ್ರವನ್ನು ಉಡುಪಿ, ಮಣಿಪಾಲ, ಮರವಂತೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಕೈಗೊಳ್ಳಲಾಗಿದ್ದು, 1.5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ವೈಟ್ ಐರಿ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry