ಭಾನುವಾರ, ಏಪ್ರಿಲ್ 18, 2021
24 °C

ದ್ವಿಚಕ್ರ ವಾಹನ-ಕ್ರೂಸರ್ ಡಿಕ್ಕಿ; ಒಂದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ದ್ವಿಚಕ್ರ ವಾಹನ ಮತ್ತು ಕ್ರೂಸರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಒಬ್ಬ ವ್ಯಕ್ತಿ ಸಾವಿಗೀಡಾಗಿರುವ, ಮತ್ತೊಬ್ಬನ ಕಾಲು ಮುರಿದ ದುರ್ಘಟನೆ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಗುರ್ತಿ ಗ್ರಾಮದ ಸಮೀಪ ಸೇಡಂ-ಗುಲ್ಬರ್ಗ ಹೆದ್ದಾರಿಯಲ್ಲಿ ಸಂಭವಿಸಿದೆ.ಭೀಮರಾಯ ನಾಗಶೇಖರ ಬೇಡರ್ ಎಂಬ ನತದೃಷ್ಟನೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಸಾಬಣ್ಣ ನಾಗಣ್ಣ ಬೇಡರ್ ಎಂಬಾತನ ಕಾಲು ಮುರಿದಿದೆ ಎಂದು ಮಾಡಬೂಳ ಪೊಲೀಸರು ತಿಳಿಸಿದ್ದಾರೆ.ಭೀಮರಾಯ ಮತ್ತು ಸಾಬಣ್ಣ ಅವರು ತಾಲ್ಲೂಕಿನ ಇಟಗಾ ಗ್ರಾಮದಿಂದ ಗುಲ್ಬರ್ಗಕ್ಕೆ ಟಿ.ವಿ.ಎಸ್ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದರು. ಗುಲ್ಬರ್ಗದಿಂದ ಸೇಡಂಗೆ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಮರಾಯ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸಾಬಣ್ಣನ ಬಲಗಾಲಿನಲ್ಲಿ ಎರಡು ಕಡೆಗೆ ಮೂಳೆ ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.ಎದುರಿನಿಂದ ವೇಗವಾಗಿ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆಯುತ್ತಿದ್ದಂತೆ ದ್ವಿಚಕ್ರ ವಾಹನವು ಕ್ರೂಸರ್ ವಾಹನದಲ್ಲಿ ಸಿಲುಕಿಕೊಂಡಿದೆ. ಬಂಪರ್‌ಗೆ ಸಿಲುಕಿದ ದ್ವಿಚಕ್ರ ವಾಹನ ಸಮೇತ ರಸ್ತೆಯ ಬಲ ಪಕ್ಕದಲ್ಲಿ ಕ್ರೂಸರ್ ವಾಹನ ರಸ್ತೆಯ ಕೆಳಗಿಳಿದಿದೆ. ಕ್ರೂಸರ್‌ನಲ್ಲಿದ್ದ ಯಾರಿಗೂ ಏನು ಆಗಿಲ್ಲ ಎಂದು ತಿಳಿದು ಬಂದಿದೆ.ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಮಾಡಬೂಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾನಪ್ಪ ದೊರೆ ಅವರು ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ಪರಿಶೀಲನೆ ನಡೆಸಿದ್ದಾರೆ. ಗುಂಡಗುರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಮೃತನ ಕುಟುಂಬಕ್ಕೆ ಶವ ಒಪ್ಪಿಸಲಾಗಿದೆ.ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.ು ಹೊಲದಲ್ಲಿ ಬಾಯಿಗೆ ಬುರುಗು ಬಂದು ಸುಸ್ತಾಗಿ ನಿಂತಿದ್ದ ರಾಷ್ಟ್ರಪಕ್ಷಿ ನವಿಲು ಶುಕ್ರವಾರ ಮನೆಗೆ ತಂದು ಪದ್ಮಾವತಿ ರಾಮಣ್ಣ ಉಪಚರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಖಾಜಾ ಪಟೇಲ್, ಬಕ್ಕಪ್ಪ ಹೊಸಮನಿ, ನಾಗಪ್ಪ ದೊಡ್ಮನಿ, ಮಾರುತಿ, ಗುಂಡಪ್ಪ, ತುಕ್ಕಪ್ಪ ಮುಂತಾದವರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.