ಗುರುವಾರ , ಮೇ 19, 2022
21 °C

ದ್ವಿತೀಯ ಪಿಯು ಪರೀಕ್ಷೆ; ತಪಾಸಣೆ ಗೆ 25 ಅಧಿಕಾರಿ.ಮೊದಲ ದಿನ 10,233 ಮಂದಿ ಸತ್ವ ಪರೀಕ್ಷೆ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಲ್ಲಿ 10,233 ವಿದ್ಯಾರ್ಥಿಗಳು ಗುರುವಾರ ದ್ವಿತೀಯ ಪಿಯು. ಪರೀಕ್ಷೆ ಎದುರಿಸಿದರು.ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಂ.ಇ.ಎಸ್., ಬಸವನಹಳ್ಳಿ ಮಹಿಳಾ ಪದವಿಪೂರ್ವ ಕಾಲೇಜು, ಎಲ್.ಬಿ.ಎಸ್. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಿತು.ಕಡೂರಿನ ಸರ್ಕಾರಿ ಬಾಲಿಕಾ ಮತ್ತು ಬಾಲಕರ ಪದವಿಪೂರ್ವ ಕಾಲೇಜು, ತರೀಕೆರೆ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಜ್ಜಂಪುರ, ಬೀರೂರು ಸರ್ಕಾರಿ ಪದವಿಪೂರ್ವ ಕಾಲೇಜು, ಮತ್ತು ದೇವನೂರಿನ ಲಕ್ಷ್ಮೀಶ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗಳು ನಡೆದವು.ಜಿಲ್ಲೆಯಲ್ಲಿ ನಕಲು ಮಾಡುವುದನ್ನು ತಡೆಗಟ್ಟಲು 25ಮಂದಿ ಪರೀಕ್ಷೆ ತಪಾಸಣೆ ಅಧಿಕಾರಿಗಳು (ಸ್ಕ್ವಾಡ್)ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಂಡದಲ್ಲಿ ಒಬ್ಬರು ಪ್ರಾಂಶುಪಾಲರು ಮೂವರು ಉಪನ್ಯಾಸಕರು ಇರುತ್ತಾರೆ.ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಒಂದು ತಂಡ ಜಿಲ್ಲೆಯಲ್ಲಿ ತಪಾಸಣೆಯಲ್ಲಿ ಕಾರ್ಯೋನ್ಮುಖವಾಗಿದೆ.

ಎಸ್‌ಎಸ್‌ಎಲ್‌ಸಿ: ಏ.1ರಿಂದ 13ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ತಾಲ್ಲೂಕಿನ 15ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ನಗರದ ಟೌನ್ ಮಹಿಳಾ ಸಮಾಜ, ಬಸವನಹಳ್ಳಿ, ಬೇಲೂರು ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಲ್‌ಬಿಎಸ್, ಮೌಂಟೆನ್‌ವ್ಯೆ, ಸಂತ ಜೋಸೆಫರ ಬಾಲಕರ ಶಾಲೆ, ಭುವನೇಶ್ವರಿ ಶಾಲೆ, ವಿಶ್ವವಿದ್ಯಾಲಯ ಪ್ರೌಢಶಾಲೆ, ಜೆ.ವಿ. ಎಸ್‌ಶಾಲೆ, ಸಂಜೀವಿನಿ ಶಾಲೆ, ಮಲೆನಾಡು ವಿದ್ಯಾಸಂಸ್ಥೆ, ಸಂತ ಜೋಸೆಫರ ಬಾಲಕರ ಶಾಲೆ, ಮಲ್ಲಂದೂರಿನ ಶಾರದಮ್ಮ ಎಂ.ಜಿ.ಪಿ. ಶೆಟ್ಟಿ ಶಾಲೆ, ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್.ಪೇಟೆ ಎಂಇಎಸ್ ಶಾಲೆ, ಕೆ.ಬಿ.ಹಾಳ್ ಸರ್ಕಾರಿ ಪ್ರೌಢಶಾಲೆ, ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞಾ ಪ್ರೌಢಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ.ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರ ತಡೆಗಟ್ಟುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ನಿಷೇಧಿತ ಸ್ಥಳವೆಂದು ಘೋಷಿಸಿ ತಹಸೀಲ್ದಾರ್ ವೀಣಾ ಆದೇಶ ಹೊರಡಿಸಿದ್ದಾರೆ.ಅಜ್ಜಂಪುರ:  713 ವಿದ್ಯಾರ್ಥಿ


ಅಜ್ಜಂಪುರ: ಇಲ್ಲಿನ ಅಜ್ಜಂಪುರದ ಶೆಟ್ರು ಸಿದ್ದಪ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯು ಪರೀಕ್ಷೆ ನಡೆಯಿತು. ಅಜ್ಜಂಪುರ, ಅಂತರಘಟ್ಟೆ, ಚೌಳಹಿರಿಯೂರು, ಶಿವನಿ, ಬುಕ್ಕಾಂಬೂದಿ ಕಾಲೇಜುಗಳ ಒಟ್ಟು 713 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಕಮಲಮ್ಮ ತಿಳಿಸಿದರು.ತರೀಕೆರೆ: 1077 ವಿದ್ಯಾರ್ಥಿ

ತರೀಕೆರೆ:
ತಾಲ್ಲೂಕಿನ ಅಜ್ಜಂಪುರ ಪಿಯು ಕಾಲೇಜು ಹೊರತುಪಡಿಸಿ ಪಟ್ಟಣದ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 1077 ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಎದುರಿಸಿದರು.ತಾಲ್ಲೂಕಿನ ಲಿಂಗದಹಳ್ಳಿ ಸರ್ಕಾರಿ ಪಿಯು, ಲಕ್ಕವಳ್ಳಿಯ ಗ್ರಾಮಜ್ಯೋತಿ ಕಾಲೇಜು ಹಾಗೂ ಪಟ್ಟಣದ ಪದವಿ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಮಾನಸ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಪರೀಕ್ಷೆ ಮುಕ್ತವಾಗಿ ನಡೆಯುವಂತೆ ಎರಡು ಕಾಲೇಜಿನ ಸುತ್ತಾ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.