ಭಾನುವಾರ, ಅಕ್ಟೋಬರ್ 20, 2019
22 °C

ದ್ವಿತೀಯ ಹಂತ ಮುಗಿಸಿದ ಅಣ್ಣಾ ಬಾಂಡ್

Published:
Updated:

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ `ಅಣ್ಣಾಬಾಂಡ್~ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. 20 ದಿನ ನಡೆದ ಚಿತ್ರದ ಚಿತ್ರೀಕರಣದಲ್ಲಿ ಪುನೀತ್ ರಾಜ್‌ಕುಮಾರ್, ಜಾಕಿಶ್ರಾಫ್, ಪ್ರಿಯಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಹಾಗೂ ಡಿಫರೆಂಟ್ ಡ್ಯಾನಿ, ರವಿವರ್ಮ ಸಾಹಸ ನಿರ್ದೇಶನದ ಎರಡು ಹೊಡೆದಾಟದ ಸನ್ನಿವೇಶಗಳನ್ನು ಮುತ್ತತ್ತಿ, ಮೇಲುಕೋಟೆ, ಮೈಸೂರು, ತಾವರೆಕೆರೆ, ಬೆಂಗಳೂರು ಸುತ್ತಮುತ್ತ ಸತ್ಯಹೆಗ್ಡೆ, ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರಿಸಿಕೊಂಡರು.ಮೂರನೇ ಹಾಗೂ ಅಂತಿಮ ಹಂತದ ಚಿತ್ರೀಕರಣವು ಜನವರಿ 3ರಿಂದ ಆರಂಭವಾಗಲಿದೆ ಎಂದು ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ, ಸತ್ಯಹೆಗ್ಡೆ ಛಾಯಾಗ್ರಹಣ, ಇಮ್ರಾನ್ ನೃತ್ಯ, ರವಿವರ್ಮ ಸಾಹಸ , ಶಶಿಧರ್ ಅಡಪ ಕಲೆ, ದೀಪು ಎಸ್ ಕುಮಾರ್ ಸಂಕಲನ, ಗಡ್ಡ ವಿಜಯ್ ನಿರ್ದೇಶನ ಸಹಕಾರ, ಚನ್ನ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಿ ಅವರದು.ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ಪ್ರಿಯಾಮಣಿ, ನಿಧಿಸುಬ್ಬಯ್ಯ, ಜಾಕಿಶ್ರಾಫ್, ಚಿ. ಗುರುದತ್, ಅವಿನಾಶ್, ಸುಮಿತ್ರಾ, ಅಚ್ಯುತ್‌ರಾವ್, ಜಾನ್‌ಕುಕ್ಕಿನ್, ಪಶುಪತಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ನೀನಾಸಂ ಸತೀಶ್, ಅಪೂರ್ವ, ಪ್ರಶಾಂತ್ ಇತರರಿದ್ದಾರೆ.

Post Comments (+)