ಬುಧವಾರ, ಮೇ 25, 2022
30 °C

ದ್ವಿಪಥ ರಸ್ತೆ ನಿರ್ಮಾಣ ನೆನೆಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಇಲ್ಲಿನ ಪುರಸಭೆಯಿಂದ ಕೈಗೆತ್ತಿಕೊಂಡಿರುವ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗದ ಪರಿಣಾಮ ಇರುವ ರಸ್ತೆ ಸಂಪೂರ್ಣ ಹದಗೆಟ್ಟು ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ನಿತ್ಯ ಧೂಳಿನ ಕಾಟದಿಂದ ಕಂಗೆಡುವಂತಾಗಿದೆ ಎಂದು ಜನರು ತೀವ್ರ ಬೇಸರ ವ್ಯಕ್ತ ಮಾಡುತ್ತಿದ್ದಾರೆ.ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಹದಗೆಟ್ಟ ರಸ್ತೆ ಸುಧಾರಿಸಿಲ್ಲ. ಇದರಿಂದ ಇದ್ದ ರಸ್ತೆ ದಿನದಿಂದ ದಿನಕ್ಕೆ ಹಾಳಾಗಿ ಗುಂಡಿಗಳಾಗಿ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಧೂಳು ಮೇಲೆದ್ದು ಪ್ರಯಾಣಿಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮೂಗು ಮುಚ್ಚಿಕೊಂಡು ಮೈತುಂಬಾ ಧೂಳು ಮಾಡಿಕೊಂಡು ತೊಂದರೆ ಅನುಭವಿಸಬೇಕಾಗಿದೆ. ಚಿತ್ತಾಪುರಕ್ಕೆ ಬರುವವರನ್ನು ಧೂಳಿನಿಂದ ಸ್ವಾಗತಿಸುವಂತಾಗಿದೆ ಎನ್ನುವ ಆಕ್ಷೇಪ ಕೇಳಿಸಿದೆ. ಆಗುತ್ತಿರುವ ತೊಂದರೆ ಗಮನಿಸಿ ಬೇಗನೆ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.ಇಲ್ಲಿನ ಕೈಗಾರಿಕೆ ಪ್ರದೇಶದ ಹತ್ತಿರ ಹಾಳು ಬಿದ್ದ ಕೀರ್ತಿ ಸಿಮೆಂಟ್ ಕಂಪೆನಿಯಿಂದ ಪಟ್ಟಣದ ಭುವನೇಶ್ವರಿ ಚೌಕ್ ವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಪುರಸಭೆ ಆಡಳಿತ ಮುಂದಾಗಿದೆ. ಕಾಮಗಾರಿಗೆ ಅನುಮೋದನೆ ಪಡೆದು ಟೆಂಡರ್ ಕರೆಯಲಾಗಿದೆ. ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ರಸ್ತೆಯ ಮಧ್ಯದಲ್ಲಿ ಬೀದಿದೀಪ ಅಳವಡಿಸಿದ ನಂತರ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಹಣಮಂತಗೌಡ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.