ದ್ವೀಪಕ್ಷಿಯ ಮಾತುಕತೆ: ಪಾಕ್ ಸಚಿವ ಮಲಿಕ್, ಪ್ರಧಾನಿ ಭೇಟಿ

7

ದ್ವೀಪಕ್ಷಿಯ ಮಾತುಕತೆ: ಪಾಕ್ ಸಚಿವ ಮಲಿಕ್, ಪ್ರಧಾನಿ ಭೇಟಿ

Published:
Updated:
ದ್ವೀಪಕ್ಷಿಯ ಮಾತುಕತೆ: ಪಾಕ್ ಸಚಿವ ಮಲಿಕ್, ಪ್ರಧಾನಿ ಭೇಟಿ

ನವದೆಹಲಿ (ಪಿಟಿಐ, ಐಎಎನ್‌ಎಸ್): ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಶನಿವಾರ ಇಲ್ಲಿ ಭೇಟಿ ಮಾಡಿ, ಎರಡು ದೇಶಗಳ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಮಲಿಕ್, ಪ್ರಧಾನಿ ಅವರೊಂದಿಗೆ ಅವರ ನಿವಾಸದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಪ್ರಮುಖ ದ್ವೀಪಕ್ಷಿಯ ವಿಷಯಗಳ ಪ್ರಸ್ತಾಪ, ಅದರಲ್ಲೂ ಪ್ರಮುಖವಾಗಿ ಭಯೋತ್ಪಾದನೆ ಮತ್ತು ಭದ್ರತೆ ವಿಷಯಗಳ ಬಗ್ಗೆ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.`ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು 26/11 ಮುಂಬೈ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಜನವರಿ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದಲ್ಲದೇ ಪಾಕಿಸ್ತಾನದ ನ್ಯಾಯಾಂಗ ಸಮಿತಿಯು ಮುಂದಿನವಾರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಕೂಡ ಇದೆ' ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಇಲ್ಲಿ ತಿಳಿಸಿದರು.ಎರಡು ದೇಶಗಳ ನಡುವೆ ಸೌಹಾರ್ದಯುತ ವಾತಾವರಣವನ್ನು ತಾವು ಬಯಸುವುದಾಗಿ ಮಲ್ಲಿಕ್ ಹೇಳಿದರು. ಈ ಸಂದರ್ಭದಲ್ಲಿ ಮಲಿಕ್ ಅವರೊಂದಿಗೆ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸಲ್ಮಾನ್ ಬಷೀರ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry