ದ್ವೇಷಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

7

ದ್ವೇಷಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

Published:
Updated:

ಲಿಂಗಸುಗೂರ: ಪ್ರಸ್ತುತ ಧಾರ್ಮಿಕ ಅಂಧಕಾರದಿಂದ ಧರ್ಮ-ಧರ್ಮಗಳ ಮಧ್ಯೆ ದ್ವೇಷ, ಅಸೂಯೆಗಳು ಹೆಚ್ಚಾಗುತ್ತ ಸಾಗಿವೆ. ಕೆಲವೇ ವ್ಯಕ್ತಿಗಳ ಸ್ವಾರ್ಥದಿಂದ ಸಮಾಜದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ. ಏಸುವಿನ ಆದರ್ಶ, ಸಂದೇಶಗಳನ್ನು ಸಾರುವ ಮೂಲಕ ಸ್ವಾರ್ಥ, ದ್ವೇಷ, ಅಸೂಯೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬಳ್ಳಾರಿ ಚರ್ಚ್‌ನ ಮೊದಲ ಫಾದರ್ ಪೋಲ್ ಫರ್ನಾಂಡಿಸ್ ಕರೆ ನೀಡಿದರು.ಮಂಗಳವಾರ ಕ್ರಿಸ್‌ಮಸ್ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಪ್ರಾಥನಾ ಸಭೆ ಉದ್ದೇಶಿಸಿ ಸಂದೇಶ ನೀಡಿದ ಅವರು, ಏಸು ಜಗತ್ತಿಗೆ ಬೆಳಕು ನೀಡಿದ ಮಹಾನ್ ಶಕ್ತಿ. ಅಂತಹ ದೇವರನ್ನು ತಾವುಗಳೆಲ್ಲ ಶೋಷಿತ, ರೋಗರುಜಿನಗಳಿಂದ ಬಳಲುವ, ಅಂಗವಿಕಲರು ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸೇವೆ ಮಾಡುವಲ್ಲಿ ಏಸುವನ್ನು ಕಾಣಿರಿ ಎಂಬ ಸಂದೇಶ ನೀಡಿದರು.

ಕ್ರಿಸ್‌ಮಸ್ ಸಂಭ್ರಮ: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸೋಮವಾರ ಮಧ್ಯರಾತ್ರಿ ಬಾಲು ಏಸು ಹುಟ್ಟಿಬಂದ ಸಂಭ್ರದ ಆಚರಣೆ ನಡೆಯಿತು.ಭವ್ಯ ಸ್ವಾಗತ

ಲೂರ್ದಮಾತಾ ಚರ್ಚ್‌ನ ಬಯಲಿನಲ್ಲಿ ನಿರ್ಮಿಸಿದ ಗೋದಲಿಯಲ್ಲಿ ಬಾಲು ಏಸು ಜನಿಸಿದ ನಿಮಿತ್ಯ ದನದ ಕೊಟ್ಟಿಗೆ ನಿರ್ಮಿಸಿ ಬಾಲು ಏಸುವಿನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್‌ಮಸ್ ಆಚರಣೆಗೆ ಭವ್ಯ ಸ್ವಾಗತ ನೀಡಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಚರ್ಚ್ ಫಾದರ್ ವೊಲ್ಟರ್ ಮಿನಿಸ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry