ದ. ಆಫ್ರಿಕಾ ವಿರುದ್ಧದ ಸರಣಿಗೆ ಸಿದ್ಧ: ಕ್ಲಾರ್ಕ್‌

7

ದ. ಆಫ್ರಿಕಾ ವಿರುದ್ಧದ ಸರಣಿಗೆ ಸಿದ್ಧ: ಕ್ಲಾರ್ಕ್‌

Published:
Updated:

ಸಿಡ್ನಿ (ಎಎಫ್‌ಪಿ): ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿರುವ ಆಸ್ಟ್ರೇಲಿಯಾ ತಂಡ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ  ಸರಣಿಗೆ ಸಜ್ಜಾಗಿದೆ ಎಂದು ನಾಯಕ ಮೈಕಲ್‌ ಕ್ಲಾರ್ಕ್‌ ಹೇಳಿದ್ದಾರೆ.ಆಸೀಸ್‌ ತಂಡ ಮುಂದಿನ ತಿಂಗಳು ಟೆಸ್ಟ್‌ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಟೆಸ್ಟ್‌ ರ್‍ಯಾಂಕಿಂಗ್‌ ನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಕಾಂಗರೂ ನಾಡಿನ ತಂಡಕ್ಕೆ ಸವಾಲಾಗುವುದು ಖಚಿತ.ಆದರೆ ದ. ಆಫ್ರಿಕಾ ನೆಲದಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವನ್ನು ಕ್ಲಾರ್ಕ್‌ ವ್ಯಕ್ತಪಡಿಸಿದ್ದಾರೆ. ‘ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್‌ ವಿಭಾಗವನ್ನು ನಾವು ಹೊಂದಿದ್ದೇವೆ. ನಮ್ಮ ಬೌಲಿಂಗ್‌ನ ಶಕ್ತಿ ಏನೆಂಬುದು ಆ್ಯಷಸ್‌ ಸರಣಿಯಲ್ಲಿ ಕಂಡುಬಂದಿದೆ’ ಎಂದು ಕ್ಲಾರ್ಕ್‌ ಭಾನುವಾರ ತಿಳಿಸಿದ್ದಾರೆ.‘ದಕ್ಷಿಣ ಆಫ್ರಿಕಾ ನೆಲದಲ್ಲಿ ನಮಗೆ ಪ್ರಬಲ ಸವಾಲು ಎದುರಾಗುವುದು ಖಚಿತ. ಅದೇ ರೀತಿ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಬೇಕಿದೆ. ಅಲ್ಲೂ ನಮಗೆ ಕಠಿಣ ಸವಾಲು ಕಾದು ಕುಳಿತಿದೆ’ ಎಂದಿದ್ದಾರೆ.‘ವಿದೇಶಿ ನೆಲದಲ್ಲಿ ಆಡಿ ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ. ಆದರೆ ಈ ತಂಡಕ್ಕೆ ಅಂತಹ ಸಾಮರ್ಥ್ಯ ಇದೆ’ ಎಂದು ಹೇಳಿದ್ದಾರೆ.

‘ತವರು ಹಾಗೂ ವಿದೇಶಿ ನೆಲದಲ್ಲಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳು ವುದು ಅಗತ್ಯ. ಹಾಗಾದಲ್ಲಿ ವಿಶ್ವದ ಶ್ರೇಷ್ಠ ತಂಡ ಎನಿಸಿಕೊಳ್ಳಲು ಸಾಧ್ಯ’ ಎಂಬುದು ಕ್ಲಾರ್ಕ್‌ ಹೇಳಿಕೆ.ಆ್ಯಷಸ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಲು ಸಾಧ್ಯವಾಗಿ ರುವುದು ಅತಿಯಾದ ಸಂತಸ ಉಂಟುಮಾಡಿದೆ ಎಂದು ಕ್ಲಾರ್ಕ್‌ ನುಡಿದಿದ್ದಾರೆ.‘2013 ರಲ್ಲಿ ನಾವು ಸಾಕಷ್ಟು ಏರಿಳಿತಗಳನ್ನು ಕಂಡೆವು. ಋತುವಿನ ಆರಂಭದಲ್ಲಿ ಸಾಲು ಸಾಲು ಸೋಲುಗಳು ಎದುರಾದವು. ಆದರೆ ವರ್ಷದ ಕೊನೆಯಲ್ಲಿ ಗೆಲುವಿನ ಹಾದಿಗೆ ಮರಳಲು ಸಾಧ್ಯವಾಯಿತು’ ಎಂದಿದ್ದಾರೆ.

ಸರಣಿಯಲ್ಲಿ ಒಟ್ಟು 37 ವಿಕೆಟ್‌ ಪಡೆದ ವೇಗದ ಬೌಲರ್‌ ಮಿಷೆಲ್‌ ಜಾನ್ಸನ್‌ ಬಗ್ಗೆ ಆಸೀಸ್‌ ನಾಯಕ ಮೆಚ್ಚುಗೆಯ ಮಾತುಗಳನ್ನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry