ಧನಂಜಯಗೆ ನೋಟಿಸ್ ನೀಡಿದ್ದು ವಿಷಾದಕರ: ಲಕ್ಷ್ಮೀನಾರಾಯಣ

7

ಧನಂಜಯಗೆ ನೋಟಿಸ್ ನೀಡಿದ್ದು ವಿಷಾದಕರ: ಲಕ್ಷ್ಮೀನಾರಾಯಣ

Published:
Updated:

ಧಾರವಾಡ: `ಕಾವೇರಿ ನದಿ ನೀರಿನ ವಿವಾದ ಹಾಗೂ ಬರಗಾಲದಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಇಲ್ಲ~ ಎಂದು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, `ಯಡಿಯೂರಪ್ಪ ಅವರದು ಮಗುವಿನಂತ ಮನಸ್ಸು ಅವರು ಪಕ್ಷ ಬಿಡುವ ವಿಚಾರವಿಲ್ಲ. ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ದೊರೆಯಬೇಕಿದೆ. ಅವರು ಪಕ್ಷ ಬಿಡುವ ವಿಚಾರದ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯಬೇಕಿದೆ. ಪಕ್ಷದ ಹೈಕಮಾಂಡ್ ಹಾಗೂ ಪಕ್ಷ ಕಟ್ಟಿದ ಪ್ರಮುಖರು ಇದರ ಬಗ್ಗೆ ಆಂತರಿಕ ಚರ್ಚೆ ಮಾಡಬೇಕು.ಇಲ್ಲವೇ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸಬೇಕಿತ್ತು. ಅವರು ಪಕ್ಷ ತೊರೆಯುವ ವಿಚಾರ ಕೈಗೊಂಡಿದ್ದು ಏಕೆ? ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡವರು ಯಾರು?ಎಂಬುದರ ಬಗ್ಗೆ ಸಮಗ್ರವಾದ ಚರ್ಚೆ ನಡೆಯಬೇಕಿದೆ. ಬಿಜೆಪಿ ಹಿರಿಯ ನಾಯಕ ಧನಂಜಯಕುಮಾರ ಅವರಿಗೆ ನೋಟಿಸ್ ನೀಡಿರುವುದು ತುಂಬಾ ಬೇಸರ ಮೂಡಿಸಿದೆ. ಇಂಥ ಆಂತರಿಕ ವಿಷಯಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಬಹುದಿತ್ತು~ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry