ಶನಿವಾರ, ಮೇ 8, 2021
26 °C

ಧನಂಜಯ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಪ್ರತಿಷ್ಠಾನ: ಗುರುವಾರ ಧನಂಜಯ ಹೆಗಡೆ ಅವರಿಂದ ಸುಗಮ ಸಂಗೀತ.ಯುವ ಹಿಂದುಸ್ತಾನಿ ಗಾಯಕರಾದ ಧನಂಜಯ ಹೆಗಡೆ ಉತ್ತರ ಕನ್ನಡ ಜಿಲ್ಲೆ ಗುಣವಂತೆಯ ಸಂಗೀತ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲೇ ಅವರ ಸಂಗೀತ ಆಸಕ್ತಿ ಪಾಲಕರ ಗಮನಕ್ಕೆ ಬಂತು.ತಾಯಿ ಗೀತಾ ಇವರಿಗೆ ಮೊದಲ ಗುರುವಾದರು.ಇದಕ್ಕೆಲ್ಲ ತಂದೆ ಜಿ. ಎಸ್. ಹೆಗಡೆ ಅವರ ಒತ್ತಾಸೆ ಇತ್ತು. 1989ರಿಂದ ಧನಂಜಯ ಅವರು ಪಂಡಿತ್ ವಿನಾಯಕ ತೊರವಿ ಅವರ ಬಳಿ ಗುರುಕುಲ ಪದ್ಧತಿಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಲಾರಂಭಿಸಿದರು.ಕುಂದಗೋಳದ ಸವಾಯ್ ಗಂಧರ್ವ ಸಂಗೀತ ಉತ್ಸವ, ಮೈಸೂರು ದಸರಾ ಉತ್ಸವ, ಗೋವಾ ಕಲಾ ಅಕಾಡೆಮಿ ದೆಹಲಿಯ ಇಂಡಿಯನ್ ಹ್ಯಾಬಿಟೆಟ್ ಸೆಂಟರ್ ಇತ್ಯಾದಿ ವೇದಿಕೆಗಳಲ್ಲಿ ಧನಂಜಯ ಕಾರ್ಯಕ್ರಮ ನೀಡಿದ್ದಾರೆ. ಅಮೆರಿಕ, ಥಾಯ್ಲೆಂಡ್‌ಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆಕಾಶವಾಣಿಯ ಗ್ರೇಡೆಡ್ ಕಲಾವಿದರು ಹೌದು. ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ `ಸಂಗೀತ ವಿಶಾರದ~ ಪದವಿ ಪಡೆದಿದ್ದಾರೆ.ಬೆಂಗಳೂರು ವಿವಿಯ ವಾಣಿಜ್ಯ ಸ್ನಾತಕೋತ್ತರ ಪದವೀಧರ. ಪ್ರಸ್ತುತ ಮುಂಬೈನಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.