ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

7

ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

Published:
Updated:

ನೆಲಮಂಗಲ: `ವಿದ್ಯಾರ್ಥಿಗಳು ಯೋಜನಾಬದ್ಧ ಕಾರ್ಯನಿರ್ವಹಣೆಯ ಜತೆಗೆ ದೃಢ ಮನೋಭಾವ, ಸೃಜನಶೀಲತೆ, ಧನಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು~ ಎಂದು ನಿವೃತ್ತ ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಎ.ವೆಂಕಟೇಶಲು ಸಲಹೆ ನೀಡಿದರು.ಬಂಡೇಮಠದಲ್ಲಿ ಈಚೆಗೆ ನಡೆದ ಯಂಟಗಾನಹಳ್ಳಿ ಮತ್ತು ತ್ಯಾಮಗೊಂಡ್ಲು ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ.ಎಂ.ಜಯಪ್ರಸಾದ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, `ಶಿಬಿರದ ಅನುಭವವನ್ನು ಜೀವನದಲ್ಲಿ  ಅಳವಡಿಸಿಕೊಂಡು ಸಮಾಜದ ಋಣ ತೀರಿಸಬೇಕು~ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಎಲ್.ಜಗದೀಶ ಪ್ರಸಾದ್, ಎನ್‌ಸಿಸಿ ನಿವೃತ್ತ ಅಧಿಕಾರಿ ಬಿ.ಎಸ್.ರವೀಂದ್ರ, ಪ್ರಾಂಶುಪಾಲ ಪ್ರದೀಪ್ ಕುಮಾರ್, ಯೋಜನಾಧಿಕಾರಿಗಳಾದ ಬಿ.ಮಧುಸೂದನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry