ಮಂಗಳವಾರ, ನವೆಂಬರ್ 19, 2019
29 °C
ಪಂಚರಂಗಿ

ಧನುಷ್ ಹಿಂದಿಗೆ ಪತ್ನಿ, ಸೋದರ ಫಿದಾ!

Published:
Updated:
ಧನುಷ್ ಹಿಂದಿಗೆ ಪತ್ನಿ, ಸೋದರ ಫಿದಾ!

ಬಾಲಿವುಡ್ ಓಣಿಯಲ್ಲಿ ಕಾಣಿಸಿಕೊಂಡಿರುವ ಧನುಷ್ ತಮ್ಮ ಮೊದಲ ಹಿಂದಿ ಚಿತ್ರ `ರಾಂಝ್ನಾ' ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಈಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ವೀಕ್ಷಿಸಿದ ಪತ್ನಿ ಐಶ್ವರ್ಯಾ, ಸಹೋದರ ಸೆಲ್ವಗಂ, ನಿರ್ಮಾಪಕ ವೆಂಕಟ್ ಪ್ರಭು ತುಂಬಾ ರೋಮಾಂಚನಗೊಂಡು ತಮ್ಮ ಅನಿಸಿಕೆಗಳನ್ನು ಟ್ವಿಟ್ಟಿಸಿದ್ದಾರೆ.ಎಲ್ಲರಿಗಿಂತ ಹೆಚ್ಚಿನ ಖುಷಿಯ ಅಲೆಯಲ್ಲಿ ತೇಲುತ್ತಿರುವುದು ಧನುಷ್ ಅವರ ಪತ್ನಿ ಐಶ್ವರ್ಯಾ ಮತ್ತು ಅವರ ಸಹೋದರ. ಮೊದಲ ಬಾರಿಗೆ ಹಿಂದಿ ಚಿತ್ರವೊಂದಕ್ಕೆ ಬಣ್ಣ ಹಚ್ಚಿರುವ ಧನುಷ್, ಈ ಚಿತ್ರದಲ್ಲಿ ಹಿಂದಿಯನ್ನು ತುಂಬಾ ಚೆನ್ನಾಗಿ ಮಾತನಾಡಿರುವುದು ಅವರ ಖುಷಿಗೆ ಕಾರಣ.“ಧನುಷ್ ಅಭಿನಯದ `ರಾಂಝ್ನಾ' ಚಿತ್ರದ ಟ್ರೈಲರ್ ಹೊರಬಂದಿದೆ. `ಓ ಮೈ ಗಾಡ್'. ನಾನು ಈ ಟ್ರೈಲರ್ ನೋಡಿ ತುಂಬ ರೋಮಾಂಚಿತಗೊಂಡಿದ್ದೇನೆ. ನನಗಂತೂ ತುಂಬ ಇಷ್ಟವಾಯ್ತು. ಈ ಚಿತ್ರದಲ್ಲಿ ಧನುಷ್ ಹಿಂದಿಯನ್ನು ಚೆನ್ನಾಗಿಯೇ ಮಾತನಾಡಿದ್ದಾರೆ.ಡೈಲಾಗ್ ಡೆಲಿವರಿಯಂತೂ ಅದ್ಭುತ' ಎಂದು ಅಚ್ಚರಿಯಿಂದ ಟ್ವಿಟ್ ಮಾಡಿದ್ದಾರೆ ಧನುಷ್ ಪತ್ನಿ ಐಶ್ವರ್ಯಾ.“`ರಾಂಝ್ನಾ' ರಾಕ್ಸ್!. ಈ ಚಿತ್ರದಲ್ಲಿ ನನ್ನ ಸಹೋದರ ಹಿಂದಿಯನ್ನು ಚೆನ್ನಾಗಿ ಮಾತನಾಡಿದ್ದಾನೆ. ಇದು ನಮ್ಮೆಲ್ಲರಿಗೂ ಖುಷಿಕೊಡುವ ವಿಚಾರ' ಎಂದಿದ್ದಾರೆ ಧನುಷ್ ಸಹೋದರ ಸೆಲ್ವಗಂ. ಅಂದಹಾಗೆ, ಈ ಚಿತ್ರವನ್ನು ಆನಂದ್ ಎಲ್.ರೈ ಅವರು ನಿರ್ದೇಶಿಸಿದ್ದು, ಸೋನಂ ಕಪೂರ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಯ್ ಡಿಯೋಲ್, ಸ್ವರ ಭಾಸ್ಕರ್ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಅವರ ಸಂಗೀತವಿದೆ. 

ಪ್ರತಿಕ್ರಿಯಿಸಿ (+)