ಧನ್ವಂತರಿ ಯೋಜನೆ ಶೀಘ್ರ ಆರಂಭ

7

ಧನ್ವಂತರಿ ಯೋಜನೆ ಶೀಘ್ರ ಆರಂಭ

Published:
Updated:
ಧನ್ವಂತರಿ ಯೋಜನೆ ಶೀಘ್ರ ಆರಂಭ

ಅಮೀನಗಡ (ಬಾಗಲಕೋಟೆ): ಆರೋಗ್ಯ ಕವಚದ (108) ಮಾದರಿಯಲ್ಲಿ ಪಶು ಆಸ್ಪತ್ರೆಗಳಲ್ಲಿಯೂ ಸಹ ತುರ್ತುಸೇವೆಯನ್ನು ಒಳಗೊಂಡ ನೂತನ `ಧನ್ವಂತರಿ ಯೋಜನೆ~ಯನ್ನು ಆರಂಭಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ತಿಳಿಸಿದರು.ಅಮೀನಗಡ ತಾಂಡಾದಲ್ಲಿ ಮೂರು ವರ್ಷಗಳಿ ಗೊಮ್ಮೆ ನಡೆಯುವ ಗುರು ಸೇವಾಲಾಲ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಾಹ ಸಮಾರಂಭ, ಸೇವಾಲಾಲರ ಸಮುದಾಯ ಭವನದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧನ್ವಂತರಿ ಯೋಜನೆಗೆ ಗುಲ್ಬರ್ಗಾದಲ್ಲಿ 15 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದ ಅವರು, ಇದರಿಂದ ರಾಜ್ಯದ 1ಕೋಟಿ ಜನರಿಗೆ ಸಹಾಯವಾಗಲಿದೆ ಎಂದರು.ಬಂಜಾರ ಸಮಾಜದ ಉನ್ನತಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲಾವಧಿಯಲ್ಲಿ ಬಂಜಾರ ಸಮಾಜ ಅನೇಕ ಕೊಡುಗೆಗಳನ್ನು ಪಡೆದಿದೆ. ಬಂಜಾರ ಅಭಿವೃದ್ಧಿ ನಿಗಮ, ಉನ್ನತ ಹುದ್ದೆಗಳಿಗೆ ಸಮಾಜದವರ ನೇಮಕವಾಗುವ ಮೂಲಕ ಉನ್ನತಿಯತ್ತ ಸಾಗಿದೆ ಎಂದರು.ಜೀವನದಲ್ಲಿ ಅಧಿಕಾರ, ಐಶ್ವರ್ಯ, ಅಂತಸ್ತು ಶಾಶ್ವತವಲ್ಲ. ಪ್ರಾಮಾಣಿಕತೆಯೊಂದೇ ಶಾಶ್ವತ. ಅದನ್ನರಿತು ಜೀವನ ಸಾಗಿಸಿ ಎಂದು ಹೇಳಿದರು.ಪ್ರಾಮಾಣಿಕತೆ ಎಂಬುದು ಸಂತೆಯಲ್ಲಿ ಸಿಗುವಂತದ್ದಲ್ಲ. ಅದನ್ನು ಗುರುಗಳ ಮಾರ್ಗದರ್ಶನ ದಿಂದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಆತ್ಮಾವಲೋಕನವೂ ಅಗತ್ಯ. ನಾನು ಬಂಜಾರ ಸಮಾಜದ ಮಂತ್ರಿಯಾಗಿ ಆಗಮಿಸಿಲ್ಲ. ಸಮಾಜದ ಶಿಸ್ತಿನ ಸಿಪಾಯಿ. ಹಣಬಲ, ತೋಳ್ಬಲ ನನಗಿಲ್ಲ. ಗುರುಗಳು ಹಾಗೂ ಜನರ ಬಲವಿದೆ. ಉಸಿರಿರುವ ತನಕ ಸಮಾಜ ಹಾಗೂ ರೈತರ ಸೇವೆ ಮಾಡುತ್ತೇನೆ ಎಂದರು.ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯ ನಮಠ, ರಾಜಶೇಖರ ಶೀಲವಂತರ, ಮನೋಹರ ಐನಾಪೂರ, ಜಿ.ಪಂ. ಉಪಾಧ್ಯಕ್ಷ ಹೂವಪ್ಪ ರಾಠೋಡ, ರವೀಂದ್ರ ಕಲಬುರ್ಗಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಬಾಂಢಗೆ, ಶಿರೂರು ನೀಲಾನಗರದ ಕುಮಾರ ಮಹಾರಾಜರು, ಕೊಪ್ಪಳಗಡ ಬಹದ್ದೂರ ಬಂಡಾದ ಬಂಜಾರ ಧರ್ಮ ಗುರು ಗೋಸಾಯಿ ಬಾವ, ಅಮೀನಗಡ ಶಂಕರರಾಜೇಂದ್ರ ಶ್ರಿ, ಡಾ. ಎಂ.ಎಸ್.ದಡ್ಡೇನವರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವಕುಮಾರ ಕನ್ನೂರ, ತಾಪಂ ಸದಸ್ಯೆ ಶೋಭಾ ಯರಗೇರಿ, ಗ್ರಾ.ಪಂ. ಸದಸ್ಯರಾದ ಶಂಕ್ರಪ್ಪ ರಾಠೋಡ, ಸಾವಿತ್ರಿ ರಾಠೋಡ, ಶಾಂತಾಬಾಯಿ ನಾಯಕ, ಯೋಗೇಶ ಲಮಾಣಿ, ಶ್ರಿಕಾಂತ ಜಾಧವ, ಕೆ.ಎಚ್.ಚವ್ಹಾಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry