ಭಾನುವಾರ, ಏಪ್ರಿಲ್ 18, 2021
25 °C

ಧನ್ವಂತರಿ ಯೋಜನೆ ಶೀಘ್ರ ಜಾರಿ: ಬೆಳಮಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `108~ ಮಾದರಿಯಲ್ಲಿ ಜಾನುವಾರುಗಳಿಗೆ ತುರ್ತುಚಿಕಿತ್ಸೆ ಕೈಗೊಳ್ಳಲು ಅನುಕೂಲವಾಗುವ `104~ ಮಾದರಿಯ ಮೊಬೈಲ್ ತುರ್ತು ಚಿಕಿತ್ಸಾ ಘಟಕಗಳನ್ನು ಧನ್ವಂತರಿ ಯೋಜನೆಯಡಿ ಶೀಘ್ರ ಜಾರಿಗೆ ತರಲಾಗುವುದು ಎಂದು ಪಶುಸಂಗೋಪನಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇವುನಾಯಕ ಬೆಳಮಗಿ ಮಂಗಳವಾರ ಹೇಳಿದರು. ರಾಜ್ಯದ 84 ತಾಲ್ಲೂಕುಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು 20 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದರೆ ಪಶುವೈದ್ಯರ ಕೊರತೆಯಿಂದ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ.ಸದ್ಯಕ್ಕೆ 24 ತಾಲ್ಲೂಕುಗಳಲ್ಲಿ 24 ಮೊಬೈಲ್ ವಾಹನಗಳನ್ನು ಜಾರಿಗೆ ತರಲು ಟೆಂಡರ್ ಕರೆಯಲಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಬೆಂಗಳೂರು ಮತ್ತು ಬೀದರ್‌ನಲ್ಲಿ 2 ಪಶುವೈದ್ಯಕೀಯ ಮಹಾವಿದ್ಯಾಲಯಗಳು ಇದ್ದವು. ಈಗ ಹಾಸನ ಮತ್ತು ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ.ಶೀಘ್ರದಲ್ಲೇ ಅಥಣಿ ಮತ್ತು ಗದಗದಲ್ಲಿ ಆರಂಭಿಸಲಾಗುವುದು. ರಾಜ್ಯದಲ್ಲಿ 637 ಪಶುವೈದ್ಯರ ಕೊರತೆ ಇದೆ. ಈ ಪೈಕಿ 390 ಪಶುವೈದ್ಯರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.ಈ ವರ್ಷ 210 ಪಶುವೈದ್ಯರ ನೇಮಕಕ್ಕೆ ಆದೇಶ ನೀಡಲಾಗುವುದು ಎಂದರು.ನಗರ ಪ್ರದೇಶಗಳಿಗೆ ಬೇರೆ ರಾಜ್ಯಗಳಿಂದ ಸರಬರಾಜಾಗುವ ಹಾಲಿನ ಗುಣಮಟ್ಟವನ್ನು                        ಮಹಾನಗರ ಪಾಲಿಕೆ ಅಧಿಕಾರಿಗಳು ಪರೀಕ್ಷಿಸಬೇಕು.ಕಳಪೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವವರವಿರುದ್ಧ ಕ್ರಮ ಜರುಗಿಸಬೇಕೆಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.