ಬುಧವಾರ, ಅಕ್ಟೋಬರ್ 16, 2019
22 °C

ಧನ್ ಸುರಕ್ಷಾ ಪ್ಲಾಟಿನಂ: ಹೊಸ ವಿಮಾ ಯೋಜನೆ

Published:
Updated:

ಬೆಂಗಳೂರು: ಸ್ಟಾರ್ ಯೂನಿಯನ್ ದೈ-ಚಿ ಲೈಫ್ ಇನ್ಶೂರೆನ್ಸ್ ಮಂಗಳವಾರ ಇಲ್ಲಿ ವಿನೂತನ ಜೀವ ವಿಮಾ ಯೋಜನೆ `ಧನ್ ಸುರಕ್ಷಾ ಪ್ಲಾಟಿನಂ~ ಅನ್ನು ಬಿಡುಗಡೆ  ಮಾಡಿದೆ.ಇದು `ಏಕ ಪಾವತಿ~  ವ್ಯವಸ್ಥೆಯ ವಿಮಾ ಯೋಜನೆ ಆಗಿದ್ದು, ಹೂಡಿಕೆದಾರರು ವಿಮೆಯ ಒಟ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಯೋಜನೆಯ ಅವಧಿ 10 ವರ್ಷಗಳು. ಕನಿಷ್ಠ ರೂ1 ಲಕ್ಷದಿಂದ ಗರಿಷ್ಠ 1 ಕೋಟಿಯವರೆಗೆ  ಹೂಡಿಕೆ ಮಾಡಬಹುದು. ಆದಾಯ ತೆರಿಗೆ ವಿನಾಯ್ತಿಯೂ ಲಭ್ಯವಿದೆ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ಮುಖ್ಯಸ್ಥ ಐ.ಎಸ್ ರಾವ್ ತಿಳಿಸಿದರು.10 ವರ್ಷಗಳ ಅಂತ್ಯದಲ್ಲಿ ನಿರ್ದಿಷ್ಟ ಖಾತರಿ ಮೊತ್ತವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ವಿಮೆ ಪಡೆದವರು ಅಕಾಲಿಕ ಮರಣಕ್ಕೆ ತುತ್ತಾದರೆ, ವಿಮೆ ಮೊತ್ತದ ಐದು ಪಟ್ಟು ಹಣವನ್ನು `ಮರಣ ಪರಿಹಾರ~ ರೂಪದಲ್ಲಿ  ನೀಡಲಾಗುತ್ತದೆ ಎಂದರು.`ಧನ್ ಸುರಕ್ಷಾ ಪ್ಲಾಟಿನಂ~  ಉನ್ನತ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿರುವ ಯೋಜನೆ. ಮಾರ್ಚ್ 31ರಂದು ಈ ಯೋಜನೆ ಕೊನೆಗೊಳ್ಳಲಿದೆ.

Post Comments (+)