ಧಮ್ಮಗಿರಿಯಲ್ಲಿನ ಬುದ್ಧನ ವಿಗ್ರಹಕ್ಕೆ ಹಾನಿ

ಗುರುವಾರ , ಜೂಲೈ 18, 2019
22 °C

ಧಮ್ಮಗಿರಿಯಲ್ಲಿನ ಬುದ್ಧನ ವಿಗ್ರಹಕ್ಕೆ ಹಾನಿ

Published:
Updated:

ಆನೇಕಲ್: ತಾಲ್ಲೂಕಿನ ತ್ಯಾವಕನಹಳ್ಳಿ ಸಮೀಪದ ಅಶೋಕ ನಗರದ ಧಮ್ಮಗಿರಿಯಲ್ಲಿರುವ ಬುದ್ಧನ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಸಿಮೆಂಟ್ ಕಟ್ಟೆಯ ಮೇಲಿನ ತಾವರೆ ಹೂವಿನ ಆಕಾರದ ಮೇಲೆ ಕುಳ್ಳಿರಿಸಲಾಗಿದ್ದ ಫೈಬರ್‌ನ ಈ ಬುದ್ಧನ ಮೂರ್ತಿಯನ್ನು ಕಿತ್ತುಹಾಕಲಾಗಿದ್ದು ಅದರ ಕಣ್ಣು, ಕಿವಿ ಹಾಗೂ ಕೈಗಳನ್ನು ಮುರಿದು ಹಾಕಲಾಗಿದೆ.

ಘಟನೆಯ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವಶಾಂತಿ ಮಹಾಬೊಧಿ ವಿಹಾರದ ಮುಖಂಡರು ಒತ್ತಾಯಿಸಿದ್ದಾರೆ.ಮುಖಂಡರಾದ ರಾವಣ, ಮಾವಳ್ಳಿ ಶಂಕರ್, ಸಿ.ಕೆ.ರಾಮು, ಗೋವಿಂದರಾಜು, ಕಲ್ಲಳ್ಳಿ ಶ್ರೀನಿವಾಸ್, ಪಟಾಪಟ್ ಪ್ರಕಾಶ್ ಮತ್ತಿತ್ತರರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಈ ದುಷ್ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry