ಸೋಮವಾರ, ಜೂನ್ 21, 2021
28 °C

ಧರ್ಮಗುರುಗಳ ಮುಂದೆ ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್‌ಎಸ್‌): ಕೇರಳದಲ್ಲಿ ಎಲ್ಲ ಪಕ್ಷಗಳು ಅಭ್ಯರ್ಥಿ­ಗಳನ್ನು ಅಂತಿಮಗೊಳಿಸಿದ್ದು, ಎಲ್ಲ ಅಭ್ಯರ್ಥಿಗಳು ಧಾರ್ಮಿಕ ಮತ್ತು ಸಾಮಾಜಿಕ ನಾಯಕರನ್ನು ಭೇಟಿ­ಯಾ­ಗಲು ಮುಗಿಬೀಳುತ್ತಿದ್ದಾರೆ. ಈಳವ ಸಮುದಾಯದ ನಾಯಕ ವೇಳಪಳ್ಳಿ ನಟೇಶನ್‌, ನಾಯರ್‌ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಸುಕುಮಾರನ್‌ ನಾಯರ್‌,  ಬಿಷಪ್‌ರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.ಈಗಾಗಲೇ ಪ್ರಚಾರ ಆರಂಭಿಸಿರುವ ಸಿಪಿಎಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ, ಸಿನಿಮಾ ನಟ ಇನೊಸೆಂಟ್‌ ಅವರು ನಟೇಶನ್‌ ಅವರನ್ನು ಭೇಟಿಯಾಗಿ ಬೆಂಬ­­ಲಿಸುವಂತೆ ಕೋರಿದ್ದಾರೆ. ‘ನಟೇಶನ್‌,  ದೊಡ್ಡ ಸಮು­ದಾಯದ  ನಾಯಕ. ಅವರ ಮಾತನ್ನು ಜನರು ಗಂಭೀರವಾಗಿ ಪರಿಗಣಿಸು­ತ್ತಾರೆ’ ಎಂದು ಇನೊಸೆಂಟ್‌ ಹೇಳಿದ್ದಾರೆ.ತ್ರಿಶೂರ್‌ನ ಸಿಪಿಐ ಅಭ್ಯರ್ಥಿ ಜಯದೇವನ್‌ ಕೂಡ ನಟೇಶನ್‌ ಅವರನ್ನು ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ.

ಕೇರಳದ ಒಟ್ಟು 3.3 ಕೋಟಿ ಜನಸಂಖ್ಯೆಯಲ್ಲಿ ಶೇ 50ರಷ್ಟು ಹಿಂದೂ­ಗಳಿದ್ದಾರೆ. ಈಳವ ಮತ್ತು ನಾಯರ್‌ ಎರಡು ಪ್ರಬಲ ಸಮುದಾಯ­ಗಳಾ­ಗಿವೆ. ರಾಜ್ಯದಲ್ಲಿ ಶೇ 24ರಷ್ಟು ಮುಸ್ಲಿ­ಮರು ಮತ್ತು ಶೇ 22ರಷ್ಟು ಕ್ರಿಶ್ಚಿಯನ್ನರಿದ್ದಾರೆ.ಹೀಗಾಗಿ ಕ್ರಿಶ್ಚಿಯನ್‌ ಬಿಷಪ್‌ರನ್ನೂ ಅಭ್ಯರ್ಥಿಗಳು ಭೇಟಿ ಮಾಡಿ ಬೆಂಬಲ ಕೇಳುತ್ತಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಅಭ್ಯರ್ಥಿಗಳೆಲ್ಲರೂ ಮುಸ್ಲಿಂ ಲೀಗ್‌ ಮುಖ್ಯಸ್ಥ ಹೈದರ್‌ ಆಲಿ ಶಿಹಾಬ್‌ ತಂಙಲ್‌ ಅವರನ್ನು ಭೇಟಿ­ಯಾಗಿ ಆಶೀರ್ವಾದ ಪಡೆಯುತ್ತಿ­ದ್ದಾರೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರ ಭೇಟಿ ಇನ್ನಷ್ಟು ಹೆಚ್ಚಲಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.