ಸೋಮವಾರ, ಜೂನ್ 21, 2021
28 °C

ಧರ್ಮಗುರು ತಾಹಿರ್ ಉಲ್ ಖಾದಿರ್ ಪ್ರವಚನ: ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದ ಅರಮನೆ ಮೈದಾನದ ಕೃಷ್ಣವಿಹಾರ್‌ನಲ್ಲಿ ಭಾನುವಾರ (ಮಾ.11) ಮುಸ್ಲಿಂ ಧರ್ಮಗುರು ತಾಹಿರ್ ಉಲ್ ಖಾದರ್ ಅವರ ಪ್ರವಚನ ಇರುವುದರಿಂದ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಕೆಂಗೇರಿ, ಬಸವನಗುಡಿ, ಬನಶಂಕರಿ ಕಡೆಯಿಂದ ಬರುವ ವಾಹನಗಳು ವಿಂಡ್ಸರ್ ಮ್ಯೋನರ್, ಪ್ಯಾಲೇಸ್ ಗುಟ್ಟಹಳ್ಳಿ, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತದ ಬಳಿ ಬಲ ತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಸಾಗಿ ಸರ್ಕಸ್ ದ್ವಾರದ ಮೂಲಕ ಅರಮನೆ ಮೈದಾನ ಪ್ರವೇಶಿಸಿ ಅಲ್ಲಿ ವಾಹನ ನಿಲುಗಡೆ ಮಾಡಬೇಕು.ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಮಾರ್ಗವಾಗಿ ಬರುವ ವಾಹನಗಳು ಬಾಷ್ಯಂ ವೃತ್ತ, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತದಲ್ಲಿ ಬಲ ತಿರುವು ಪಡೆದು ಸರ್ಕಸ್ ದ್ವಾರದ ಮೂಲಕ ಅರಮನೆ ಮೈದಾನ ಪ್ರವೇಶಿಸಿ ವಾಹನ ನಿಲುಗಡೆ ಮಾಡಬೇಕು.ಯಶವಂತಪುರ, ದಾಸರಹಳ್ಳಿ, ನೆಲಮಂಗಲ, ತಾವರೆಕೆರೆಯಿಂದ ಬರುವ ವಾಹನಗಳು ಗೊರಗುಂಟೆ ಪಾಳ್ಯದ ವರ್ತುಲ ರಸ್ತೆಯಲ್ಲಿ ಸಾಗಿ ಹೆಬ್ಬಾಳ, ಬಳ್ಳಾರಿ ರಸ್ತೆ ಮೂಲಕ ಮೇಖ್ರಿ ವೃತ್ತಕ್ಕೆ ಬಂದು ಎಡ ತಿರುವು ಪಡೆದು, ಜಯಮಹಲ್ ರಸ್ತೆಯಿಂದ ಸರ್ಕಸ್ ದ್ವಾರದ ಅರಮನೆ ಮೈದಾನವನ್ನು ಪ್ರವೇಶಿಸಿ ವಾಹನ ನಿಲುಗಡೆ ಮಾಡಬೇಕು.ಹೆಬ್ಬಾಳ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರದಿಂದ ಬರುವ ವಾಹನಗಳು ಗಂಗಾನಗರ, ಮೇಖ್ರಿ ವೃತ್ತದಲ್ಲಿ ಎಡ ತಿರುವು ಪಡೆದು, ಜಯಮಹಲ್ ರಸ್ತೆಯಲ್ಲಿ ಸಾಗಿ ಸರ್ಕಸ್ ದ್ವಾರದ ಮೂಲಕ ಅರಮನೆ ಮೈದಾನ ತಲುಪಿ ನಿಲುಗಡೆ ಮಾಡಬೇಕು.ಆನೇಕಲ್, ಮಾರತ್‌ಹಳ್ಳಿ, ಹಲಸೂರು, ಕೆ.ಆರ್.ಪುರ, ಹೊಸಕೋಟೆ, ಜಯನಗರ ಕಡೆಯಿಂದ ಬರುವ ವಾಹನಗಳು ಹಳೆ ಮದ್ರಾಸ್ ರಸ್ತೆ, ನಂದಿದುರ್ಗಾ ರಸ್ತೆ ಮೂಲಕ ಸರ್ಕಸ್ ದ್ವಾರವನ್ನು ಪ್ರವೇಶಿಸಬಹುದು.ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮದ್ಯಾಹ್ನ ಎರಡು ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ಸಹಕರಿಸಬೇಕು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ. ಎಂ.ಎ.ಸಲೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.