ಧರ್ಮದಿಂದ ನೈತಿಕ ಮೌಲ್ಯ

7

ಧರ್ಮದಿಂದ ನೈತಿಕ ಮೌಲ್ಯ

Published:
Updated:

ಚಾಮರಾಜನಗರ: ಮನುಷ್ಯನಲ್ಲಿ ನೈತಿಕ ಮೌಲ್ಯಗಳನ್ನು ತುಂಬಿ, ಜಾತೀಯತೆ ಮೂಢ ನಂಬಿಕೆಯನ್ನು ದೂರ ಮಾಡು ವುದೇ ಧರ್ಮ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಶನಿವಾರ ತಿಳಿಸಿದರು.ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ವಿಶ್ವ ಧರ್ಮ ಪ್ರವಚನದ ಗುರುವಂದನ ಸಮಾರಂಭದಲ್ಲಿ ಮಾತನಾಡಿದರುಯಾವುದು ವ್ಯಕ್ತಿ ಹಾಗೂ ಸಮಾಜ ವನ್ನು ಎತ್ತಿ ಹಿಡಿಯುವುದೋ ಅದುವೇ ಧರ್ಮ. ಇಂತಹ ಧರ್ಮದ ಕಡೆಗೆ ಜನರು ಬಾರದೇ ಇದ್ದಾಗ ನಾವೇ ಅದನ್ನು ಜನರ ಕಡೆಗೆ ಒಯ್ಯಬೇಕು, ಆದ್ದರಿಂದ  ಪ್ರವಚನದ ಮೂಲಕ ಧರ್ಮದ ಸಾರವನ್ನು ದೇಶ ವಿದೇಶ ಗಳಲ್ಲಿಯೂ ಪಸರಿಸುವಂತೆ ಮಾಡುತ್ತಿ ದ್ದೇವೆ ಎಂದು ತಿಳಿಸಿದರು.ಬಸವಣ್ಣನವರ ಬಗ್ಗೆ ಸರಿಯಾಗಿ ಅಧ್ಯಯನ ಮಾಡದೆ ಕೆಲವು ಮಠಾಧೀಶರು ಹಾಗೂ ಸಾಹಿತಿಗಳು ತಪ್ಪು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಪಾಲ್ಕುರುಕೆ ಸೋಮನಾಥನ ಕಾವ್ಯ ಹಾಗೂ ಭೀಮಕವಿಯ ಬಸವ ಪುರಾಣದ ಗ್ರಂಥಗಳು ಬಸವಣ್ಣನವರ ಬಗ್ಗೆ ಸರಿಯಾದ ಸ್ಪಷ್ಟವಾದ ಮಾಹಿತಿ ಯನ್ನು ಒದಗಿಸುವ ಮೊಟ್ಟಮೊದಲ ಗ್ರಂಥಗಳಾಗಿವೆ, ಕೆಲವು ಗ್ರಂಥಗಳು ಗೊಂದಲವನ್ನು ಸೃಷ್ಟಿಸಿವೆ ಎಂದರು.ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನ ಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಆಧ್ಯಕ್ಷ ಕೆ.ಎಸ್.ನಾಗರಾಜಪ್ಪ ಧ್ವಜಾರೋಹಣ ನೆರವೇರಿಸಿದರು. ಧರ್ಮಗುರು ಪೂಜೆ ಯನ್ನು ಗುರುನಾಥ ಮಾಡಿದರು. ಅಧ್ಯಕ್ಷತೆಯನ್ನು ಎನ್.ಎಸ್.ನಾಗ ಮಲ್ಲಪ್ಪ ನೇನೆಕಟ್ಟೆ ವಹಿಸಿದ್ದರು.ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ 12 ಚಿನ್ನದ ಪದಕ ಪಡೆದ ಜೆ.ಮಾನಸಾ ಅವರನ್ನು ಸನ್ಮಾನಿಸಲಾಯಿತು.  ಧಾರ ವಾಡ ಅಕ್ಕಮಹಾದೇವಿ ಅನು ಭವ ಪೀಠದ ಮಾತೆ ಗಂಗಾದೇವಿ, ಬೆಂಗ ಳೂರು ಬಸವ ಮಂಟಪದ ಮಾತೆ ಬಸವರತ್ನಾದೇವಿ, ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಚಾಮರಾಜನಗರ ಘಟಕದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ನಂದೀಶಕುಮಾರ, ಕದಳಿ ವೇದಿಕೆಯ ಅಧ್ಯಕ್ಷೆ ಮಾದ ಲಾಂಬಿಕೆ ನಂಜುಂಡಸ್ವಾಮಿ, ರಾಷ್ಟ್ರೀ ಯ ಬಸವ ದಳದ ರಾಜ್ಯ ಘಟಕದ ಅಧ್ಯಕ್ಷ ಕೆ.ವೀರಣ್ಣ ಲಿಂಗಾಯತ, ಎಂ.ಎಸ್.ರಾಘವೇಂದ್ರ, ಮುಖಂಡ ರಾದ ಕೆ.ಬಾಲಸುಬ್ರಹ್ಮಣ್ಯಂ, ಜಿ.ಪಂ. ಸದಸ್ಯೆ ನಿತ್ಯಪ್ರವೀಣ, ರಾಜ ಶೇಖರ, ಪುಟ್ಟಮಲ್ಲಪ್ಪ, ವೀರಭದ್ರ ಸ್ವಾಮಿ, ಎಚ್.ಎಸ್.ನಂಜುಂಡಸ್ವಾಮಿ, ಎನ್.ಎಂ.ಗಂಗಾಧರಪ್ಪ ನೇನೆಕಟ್ಟೆ, ನಾಗರಾಜು ಹಾಜರಿ ್ದದರು.

ಕೆ.ವೀರಭದ್ರಪ್ಪ ಸ್ವಾಗತಿಸಿದರು. ಚಂದ್ರಮ್ಮ ಸದಾನಂದ ಸ್ವಾಮಿ ನಿರೂಪಿಸಿ, ವಂದಿಸಿದರು.ಅರ್ಜಿ ಆಹ್ವಾನ

ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿಯಲ್ಲಿರುವ ಜೆಎಸ್‌ಎಸ್ ಅನಾಥಾಲಯಕ್ಕೆ ಪ್ರಸಕ್ತ ಸಾಲಿನ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಲಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಕರ್ಯವಿದೆ. ಆಸಕ್ತ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರ ಬೇಕು. ಅರ್ಜಿ ನಮೂನೆ ಗಳನ್ನು  ವಿದ್ಯಾರ್ಥಿನಿಲಯದಿಂದ ಪಡೆದು ಮೇ 20ರ ಒಳಗೆ ಸಲ್ಲಿಸಬೇಕು ಎಂದು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಉಪಕಾರ್ಯದರ್ಶಿ ಎಸ್.ಶಿವಕುಮಾರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry