ಧರ್ಮನಿಂದನೆ ಆರೋಪ: ಪ್ರಾಧ್ಯಾಪಕನ ಬಂಧನ

7

ಧರ್ಮನಿಂದನೆ ಆರೋಪ: ಪ್ರಾಧ್ಯಾಪಕನ ಬಂಧನ

Published:
Updated:

ಇಸ್ಲಾಮಾಬಾದ್(ಪಿಟಿಐ): ಪುಸ್ತಕದಲ್ಲಿ ಧರ್ಮನಿಂದನೆಯ ಅಂಶಗಳು ಪ್ರಕಟವಾಗಿರುವ ಆರೋಪದ ಮೇಲೆ ಪೊಲೀಸರು ಸೋಮವಾರ ಇಸ್ಲಾಮಾಬಾದ್‌ನಲ್ಲಿ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ್ದಾರೆ.

ಲೇಖಕರೂ ಆಗಿರುವ ಪ್ರಾಧ್ಯಾಪಕ ಇಫ್ತಿಕಾರ್ ಖಾನ್ (60) ಬಂಧಿತರು.ಇಫ್ತಿಕಾರ್ ಅವರು ಬರೆದಿರುವ ಪುಸ್ತಕದಲ್ಲಿ ಧರ್ಮನಿಂದನೆಯ ಅಂಶಗಳಿವೆ ಎಂದು ರಾವಲ್ಪಿಂಡಿಯಲ್ಲಿರುವ ಅವರ ಅಳಿಯ ಶೇಖ್ ಉಸ್ಮಾನ್ ಆರೋಪಿಸಿದ್ದರು.ಅಲ್ಲದೇ ಸ್ಥಳೀಯರು, ಧರ್ಮಗುರುಗಳು ಹಾಗೂ ನೂರಾರು ಮದರಸಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಇಫ್ತಿಕಾರ್ ಬಂಧನಕ್ಕೆ ಆಗ್ರಹಿಸಿದ್ದರು. ಉಸ್ಮಾನ್ ಮತ್ತು ಇಫ್ತಿಕಾರ್ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry