ಧರ್ಮಪಾಲ್ 4ನೇ ಬಾರಿ ಪುರಸಭೆ ಅಧ್ಯಕ್ಷ

7

ಧರ್ಮಪಾಲ್ 4ನೇ ಬಾರಿ ಪುರಸಭೆ ಅಧ್ಯಕ್ಷ

Published:
Updated:

ಪಾವಗಡ: ಪುರಸಭೆ ಅಧ್ಯಕ್ಷರಾಗಿ 4ನೇ ಬಾರಿಗೆ ಜಿ.ಎಸ್.ಧರ್ಮಪಾಲ್, ಉಪಾಧ್ಯಕ್ಷರಾಗಿ ಸುಮಾ ಸುನಿಲ್‌ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಿತು. ಸ್ಪರ್ಧಿಗಳೇ ಇಲ್ಲದೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಚೆನ್ನಬಸಪ್ಪ ಘೋಷಿಸಿದರು.1962ರಿಂದ ಸತತ 50 ವರ್ಷಗಳ ಕಾಲ ವಿವಿಧ ಚುನಾವಣೆಗಳಲ್ಲಿ ಧರ್ಮಪಾಲ್ ಗೆಲುವು ಸಾಧಿಸಿದ್ದಾರೆ. ಒಮ್ಮೆಯೂ ಸೋಲು ಅನುಭವಿಸಿಲ್ಲ. 18 ವರ್ಷ ಅಧ್ಯಕ್ಷರಾಗಿ 5 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲಿ ದಾಖಲೆಯಾಗಿದೆ.ಸಂತಸ: ಜಿ.ಎಸ್.ಧರ್ಮಪಾಲ್ ಅವರ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದರು. ಗಂಟೆಗಟ್ಟಲೆ ಸುಟ್ಟ ಪಟಾಕಿಯ ಸದ್ದು ನೆರೆದಿದ್ದವರ ಕಿವಿ ಕಿವುಡಾಗಿಸುವಂತಿತ್ತು. ನೂರಾರು ಅಭಿಮಾನಿಗಳು ಹಾರ ತುರಾಯಿ ನೀಡಿ ಅಭಿನಂದಿಸಿದರು. ಕುಟುಂಬ ವರ್ಗ ಮತ್ತು ಅಭಿಮಾನಿಗಳೊಂದಿಗೆ ಅವರು ಶನೇಶ್ಚರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಅಧ್ಯಕ್ಷ ಸ್ಥಾನ ದೊರೆಯಲು ಸಹಕರಿಸಿದ ಎಲ್ಲ ಸದಸ್ಯರಿಗೆ ಮತ್ತು ಶಾಸಕ ವೆಂಕಟರಮಣಪ್ಪ ಅವರಿಗೆ ಕೃತಜ್ಞತೆ ಅರ್ಪಿಸಿದರು.ಸದಸ್ಯರು ಗೈರು

ಸದಸ್ಯರು ಗೈರು ಹಾಜರಾದ ಕಾರಣ ಬುಧವಾರ ನಡೆಯಬೇಕಿದ್ದ ತಾ.ಪಂ ಸಭೆಯನ್ನು ಮುಂದೂಡಲಾಯಿತು.

ಹಿಂದಿನ ತಾ.ಪಂ ಸಭೆಯಲ್ಲಿ ಕೆಲವು ಸದಸ್ಯರ ಮೇಲೆ ಹಲ್ಲೆ ನಡೆಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕ್ರಮ ಖಂಡಿಸಿ ಸದಸ್ಯರು ಸಭೆಗೆ ಗೈರು ಹಾಜರಾದರು ಎಂದು ಉಪಾಧ್ಯಕ್ಷ  ಚಂದ್ರಶೇಖರ್ ಹೇಳಿದರು. ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲು ಸಭೆ ಕರೆಯಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry