ಧರ್ಮವೆಂದರೆ ಪ್ರಾಮಾಣಿಕ ಮನಸ್ಸು, ಶ್ರದ್ಧೆ

7

ಧರ್ಮವೆಂದರೆ ಪ್ರಾಮಾಣಿಕ ಮನಸ್ಸು, ಶ್ರದ್ಧೆ

Published:
Updated:

ಸಿದ್ದಾಪುರ:  ` ಧರ್ಮವೆಂದರೆ ಶುದ್ಧ ವಾದ ಮತ್ತು ಪ್ರಾಮಾಣಿಕವಾದ ಮನಸ್ಸು ಹೊಂದಿರುವುದು~ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ  ವ್ಯಾಖ್ಯಾನ ಮಾಡಿದರು.ತಾಲ್ಲೂಕಿನ ತರಳೀಮಠದಲ್ಲಿ ಸೋಮ ವಾರ ಏರ್ಪಡಿಸಿದ್ದ 23ನೇ ವರ್ಷದ 1008 ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜೆಯ  ಧರ್ಮಸಭೆಯಲ್ಲಿ ಅವರು ಮಾತನಾಡಿದರು.`ನಮ್ಮ ನಡುವೆ ಅನೇಕ ಜಾತಿ, ಧರ್ಮಗಳಿವೆ. ಯಾವುದೇ ಜಾತಿ ಅಥವಾ ಧರ್ಮದೊಳಗೆ ನಾವು ಕೇಳಿ ಕೊಂಡು ಹುಟ್ಟಿ ಬಂದಿರುವದಿಲ್ಲ. ಧರ್ಮ ಎಂದರೇ ಒಂದು ಶಿಸ್ತು. ಅದು ನಮ್ಮಳಗಿರಬೇಕಾದ ಶಿಸ್ತು~ ಎಂದರು.`ನಾವು ಮುಂದೆ ಬರಬೇಕಾದರೆ ಆದರ್ಶವಾಗಿ ದೊಡ್ಡ ವ್ಯಕ್ತಿಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ ಕ್ರೀಡಾಪಟುಗಳು, ಕಲಾವಿದರು ನಮಗೆ ಆದರ್ಶವಾಗಬೇಕು. ಇದು ನಮ್ಮ ಧರ್ಮವಾಗಬೇಕು~ ಎಂದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ,  `ನಮ್ಮ ಸಮಾಜ ಧಾರ್ಮಿಕವಾಗಿ ಹಿಂದುಳಿದಿದೆ. ನಮ್ಮ ಸಮಾಜವೂ ಧರ್ಮಗುರುಗಳನ್ನು ಇಟ್ಟುಕೊಂಡು,ಅವರ ಆದೇಶವನ್ನು ಪಾಲಿಸಬೇಕು.ನಾವು ಪೂಜೆ-ಪುನಸ್ಕಾರ ಗಳನ್ನು ಮಾಡಬೇಕು.ಆದರೆ  ಗಾಡಿ ಗತನದಂತಹ ಮೂಢನಂಬಿಕೆಗಳಿಂದ ದೂರವಿರಬೇಕು~ ಎಂದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿ ಷತ್ ಸದಸ್ಯ ಡಿ.ಎಸ್.ವೀರಯ್ಯ, ಕುಮಟಾದ ಆರ್.ಎಚ್.ನಾಯ್ಕ, ವಿದ್ವಾನ್ ಡಾ.ಲಕ್ಷ್ಮೀಪತಿ ಭಟ್ಟ ಮಾತನಾಡಿದರು. ಜಿ.ಪಂ.ಸದಸ್ಯರಾದ ಈಶ್ವರ ನಾಯ್ಕ ಮತ್ತು ಕಮಲಾ ನಾಯ್ಕ ಉಪಸ್ಥಿತ ರಿದ್ದರು. ಅಧ್ಯಕ್ಷತೆಯನ್ನು  ತರಳೀ ಮಠದ ಬಾಲಕೃಷ್ಣ ಸ್ವಾಮೀಜಿ ವಹಿಸಿದ್ದರು.ತರಳೀ ಶ್ರೀ ಪ್ರಶಸ್ತಿ:   ನಿವೃತ್ತ ವೈದ್ಯಾಧಿಕಾರಿ ಡಾ.ಜಿ.ಡಿ.ನಾರಾಯಣಪ್ಪ ಅವರಿಗೆ `ತರಳೀ ಶ್ರೀ~ ಪ್ರಶಸ್ತಿ ಯನ್ನು ಕಾರ್ಯಕ್ರಮದಲ್ಲಿ ನೀಡಲಾ ಯಿತು. `ಡಾ.ರಾಜಕುಮಾರ್ ನ್ಯಾನೊ-ಬಯೊ ಪಾರ್ಕ್~ ಮತ್ತು ಸಾಂಸ್ಕೃತಿಕ ಭವನಕ್ಕೆ ಶಿಲಾನ್ಯಾಸ ಮಾಡ ಲಾಯಿತು. ನೂತನ ಸಮುದಾಯ ಭವನದ ಉದ್ಘಾಟನೆ ನೆರವೇರಿಸಲಾಯಿತು.ಡಾ.ಲಕ್ಷ್ಮೀಪತಿ ಭಟ್ಟ ವೇದಘೋಷ ಮಾಡಿದರು. ತರಳೀಮಠದ ಆಡಳಿತ ಸಮಿತಿಯ ಅಧ್ಯಕ್ಷ ಎನ್.ಡಿ.ನಾಯ್ಕ ಸ್ವಾಗತಿಸಿದರು. ತರಳಿಮಠದ ವ್ರತ ಸಮಿತಿಯ ಅಧ್ಯಕ್ಷ ಈಶ್ವರ ನಾಯ್ಕ  ಪ್ರಾಸ್ತಾವಿಕ ಮಾತನಾಡಿದರು. ಉಪ ನ್ಯಾಸಕ ಎಂ.ಕೆ.ನಾಯ್ಕ ನಿರೂಪಿಸಿದರು. ಡೊಳ್ಳು ಕುಣಿತ:  ತೃತೀಯ ವರ್ಷದ ರಾಜ್ಯಮಟ್ಟದ ಡೊಳ್ಳು ಕುಣಿತ ಸ್ಪರ್ಧೆ (ಬಂಗಾರಪ್ಪ ಟ್ರೋಫಿ)ಯನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry