ಶುಕ್ರವಾರ, ಜೂನ್ 25, 2021
22 °C

ಧರ್ಮಶಾಲೆಯ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪೇಗೌಡರ ಧಾರ್ಷ್ಟ್ಯಕ್ಕೆ ಕೋಪಿಸಿಕೊಂಡು ಬೆಂಗಳೂರು ಬಿಟ್ಟು ಹೊರ ಹೋಗಿದ್ದ ಕಲ್ಯಾಣಪ್ಪ ಹಿಂದಿರುಗುವ ವೇಳೆಗೆ ಇಲ್ಲಿ ಆಡಳಿತ ಬದಲಾಗಿತ್ತು. ಸಾಮ್ರಾಜ್ಯ ವಿಸ್ತರಣೆಗೊಂಡದ್ದರಿಂದ ಗೌಡರಿಗೆ ಬೆಂಗಳೂರಿನ ಹೊರಗೂ ಒಂದು ಅರಮನೆಯಿತ್ತು.

 

ಒಂದು ದಿನ ಕಲ್ಯಾಣಪ್ಪ ಈ ಅರಮನೆಯೊಳಕ್ಕೆ ನುಗ್ಗಿದ. ಅವನ ತೇಜೋಮಯ ರೂಪವನ್ನು ಕಂಡ ಯಾರೂ ತಡೆಯಲಿಲ್ಲ. ಒಡ್ಡೋಲಗದಲ್ಲಿ ಆಸೀನನಾಗಿದ್ದ ದೊರೆಯನ್ನು ಉದ್ದೇಶಿಸಿ ಈ ಧರ್ಮಶಾಲೆಯಲ್ಲಿ ನನಗೊಂದು ದಿನ ಇರಲು ಸಾಧ್ಯವೇ ಎಂದು ವಿಚಾರಿಸಿದ.ತನ್ನ ಅರಮನೆಯನ್ನು ಧರ್ಮಶಾಲೆ ಎಂದದ್ದು ದೊರೆಗೆ ಸಣ್ಣಗೆ ಕೋಪ ತರಿಸಿತು. `ಏನು...? ಇದನ್ನು ಧರ್ಮಶಾಲೆ ಅಂದಿರಾ....?~ ಎಂದ ದೊರೆ.ಕಲ್ಯಾಣಪ್ಪ ವಿಚಲಿತನಾಗದೆ `ಇದು ಧರ್ಮಶಾಲೆಯಲ್ಲದೆ ಮತ್ತೇನು...?~ ಎಂದು ಮರು ಪ್ರಶ್ನೆ ಹಾಕಿದೆ.ದೊರೆಗೆ ತಲೆಕೆಟ್ಟು ಹೋಯಿತು. `ಇದು ಹೇಗೆ ಧರ್ಮಶಾಲೆಯಾಗಲು ಸಾಧ್ಯ?~ ಎಂದು ಮತ್ತೆ ಕೇಳಿದ.ಕಲ್ಯಾಣಪ್ಪ ಪ್ರಶ್ನಿಸಿದ `ನಿನಗಿಂತ ಮೊದಲು ಇಲ್ಲಿ ಯಾರಿದ್ದರು...?~

ದೊರೆ ಉತ್ತರಿಸಿದ `ನನ್ನ ಅಪ್ಪ~

ಮತ್ತೆ ಕಲ್ಯಾಣಪ್ಪನ ಪ್ರಶ್ನೆ `ಅವನಿಗಿಂತ ಮೊದಲು~

ದೊರೆಯ ಉತ್ತರ `ನನ್ನ ಅಜ್ಜ~ಕಲ್ಯಾಣಪ್ಪ ಉತ್ತರಿಸಿದ `ಜನರು ಬಂದು ಇದ್ದು ಮತ್ತೆ ಎದ್ದು ಹೋಗುವ ಸ್ಥಳವನ್ನು ಧರ್ಮಶಾಲೆಯೆಂದಲ್ಲವೇ ಕರೆಯಬೇಕಾದದ್ದು.~

ದೊರೆಗೆ ಬಂದವನು ಕಲ್ಯಾಣಪ್ಪನೆಂದು ಅರ್ಥವಾಯಿತು.ಬಿಸಿಯಾಗಿ ಕುದಿಯುವುದುಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಕ್ಯಾಂಪಸ್‌ನೊಳಗಿನ ಕಾಡಿನೊಳಗೆ ಕುಳಿತಿದ್ದ ಆ ಯುವಕ ಕಿಸೆಯಿಂದ ಮೆಲ್ಲಗೆ ಸಿಗರೇಟು ತೆಗೆದು ಅದನ್ನೊಮ್ಮೆ ನೆಕ್ಕಿ ಒಂದು ತುದಿಗೆ ಬೆಂಕಿ ಇಟ್ಟು ಒಂದು ದೊಡ್ಡ ಝರಕಿ ಎಳೆದು ಗಾಂಜಾದ ಹೊಗೆಯನ್ನು ಶ್ವಾಸಕೋಶದೊಳಕ್ಕೆ ತುಂಬಿಸಿಕೊಂಡ.

 

ಅವನ ಸುತ್ತಲಿನ ಜಗತ್ತು ತಿರುಗಲಾರಂಭಿಸುವ ಆ ಕ್ಷಣಕ್ಕೆ ಅಲ್ಲಿಗೆ ಕಲ್ಯಾಣಪ್ಪ ಬಂದು ಕುಳಿತ. ಆ ಯುವಕನಿಗೆ ಸಂತೋಷವಾಗಿ ತನ್ನ ಸಿಗರೇಟನ್ನು ಕಲ್ಯಾಣಪ್ಪನಿಗೆ ದಾಟಿಸಿದ. ಕಲ್ಯಾಣಪ್ಪನೂ ಒಂದು ಧಮ್ ಎಳೆದುಕೊಳ್ಳುತ್ತಿರುವಾಗ ಆ ಹುಡುಗ ಮಾತನಾಡಲಾರಂಭಿಸಿದ.`ನಾನು ಎಸ್‌ಎಸ್‌ಎಲ್‌ಸಿಯಲ್ಲಿ ರ‌್ಯಾಂಕ್, ಪಿಯುಸಿಯಲ್ಲಿ ರ‌್ಯಾಂಕ್ ಮತ್ತೆ ಸಿಇಟಿಯಲ್ಲಿ ರ‌್ಯಾಂಕ್ ಅಷ್ಟೇಕೆ ಗೇಟ್‌ನಲ್ಲೂ ರ‌್ಯಾಂಕ್ ತಗೊಂಡೆ~ ಎಂದು ರ‌್ಯಾಂಕಿನ ಕಥೆ ಮುಂದುವರಿಸ ಹೊರಟಾಗ ಕಲ್ಯಾಣಪ್ಪ ಮಧ್ಯ ಪ್ರವೇಶಿಸಿದ- `ಅದಕ್ಕೇ ನೀನು ಐಐಎಸ್‌ಸಿಗೆ ಬಂದಿರೋದು ಮುಂದಕ್ಕೆ ಹೇಳು~.ಆ ಯುವಕ ಮಾತು ಮುಂದುವರಿಸಿ `ಐನ್‌ಸ್ಟೀನ್ ರ‌್ಯಾಂಕ್ ತಗೊಳ್ಳದೇನೇ ಏನೇನು ಮಾಡಿಬಿಟ್ಟ. ನ್ಯೂಟನ್ ಸೇಬು ತಲೆಮೇಲೆ ಬಿದ್ದಿದ್ದಕ್ಕೇ ಕಂಡುಕೊಂಡುಬಿಟ್ಟ. ಸಮುದ್ರದಲ್ಲಿ ಹೋಗ್ತಾ ಸಿ.ವಿ.ರಾಮನ್‌ಗೆ ಎಂಥಾ ವಿಷಯ ಹೊಳೆದು ಬಿಟ್ಟಿತು. ನಾನಿಲ್ಲಿ ಇಷ್ಟೆಲ್ಲಾ ರ‌್ಯಾಂಕ್ ತಕ್ಕೊಂಡು ಒರಿಜಿನಲ್ ಐಡಿಯಾ ಬರ‌್ತಿಲ್ಲ~ ಎಂದು ಕೊರಗತೊಡಗಿದ.ಕಲ್ಯಾಣಪ್ಪ ಜೋರಾಗಿ ನಕ್ಕು `ನೀರು ನಿಧಾನವಾಗಿ ಬಿಸಿಯಾಗಿ ಒಮ್ಮೆಗೇ ಕುದಿಯುತ್ತದೆ~ ಎಂದ.ಇದಾಗಿ ಐವತ್ತು ವರ್ಷ ಕಳೆದ ಮೇಲೆ ಆ ಹುಡುಗನ ಹೆಸರನ್ನು ಬೆಂಗಳೂರಿನ ಒಂದು ವೃತ್ತಕ್ಕೆ ಇಡಲಾಯಿತು. 

 ಅಮ್ಮಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.