ಧರ್ಮಸ್ಥಳ: ಕಲಿಕುಂಡ ಆರಾಧನೆ

7

ಧರ್ಮಸ್ಥಳ: ಕಲಿಕುಂಡ ಆರಾಧನೆ

Published:
Updated:

ಉಜಿರೆ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರ ಷಷ್ಟ್ಯಬ್ದ ಆಚರಣೆಯ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಕಲಿಕುಂಡ ಯಂತ್ರಾರಾಧನೆ, ಅಷ್ಟವಿಧಾರ್ಚನೆ ಪೂಜೆ, ಧೂಪಾರ್ಚನೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾ­ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ. ರಾಜೇಂದ್ರ ಶೆಟ್ಟಿ ಶುಭಾಶಂಸನೆ ಮಾಡಿ, ಡಿ.ಹರ್ಷೇಂದ್ರ ಕುಮಾರ್ ಅವರ ನೇರ ನಡೆ-ನುಡಿ, ಸ್ನೇಹ ಪ್ರವೃತ್ತಿ, ಶಿಸ್ತಿನ ಜೀವನ, ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಂಗಳೂರಿನ ಖ್ಯಾತ ವೈದ್ಯ ಡಾ. ಟಿ. ನಾಗ­ಕುಮಾರ ಶೆಟ್ಟಿ ’ರತ್ನಾಕರನ ಹಾಡುಗಳು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಷ್ಟಷ್ಯಬ್ದ ಆಚರಣೆ­ಯ ಸವಿ ನೆನಪಿಗಾಗಿ ಈ ಕೃತಿಯನ್ನು ಶಾಸ್ತ್ರದಾನವಾಗಿ ಎಲ್ಲರಿಗೂ ವಿತರಿಸಲಾಯಿತು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾ­ವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಪ್ರೊ.ಎಸ್.­ಪ್ರಭಾಕರ್ ಮತ್ತು ಡಾ.ಬಿ.ಯಶೋ­ವರ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry