ಧವನ್ ಮದುವೆ-ಆಪ್ತ ಸ್ನೇಹಿತರಿಗೆ ಅಚ್ಚರಿ

ಸೋಮವಾರ, ಜೂಲೈ 22, 2019
27 °C

ಧವನ್ ಮದುವೆ-ಆಪ್ತ ಸ್ನೇಹಿತರಿಗೆ ಅಚ್ಚರಿ

Published:
Updated:

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ಕೆ. ಧವನ್ ಅವರು ಆಪ್ತರಿಗೆ ಅನಿರೀಕ್ಷಿತ ಸುದ್ದಿ ಕೊಡುವುದರಲ್ಲಿ ಸಿದ್ಧಹಸ್ತರು! ಅವರು ತಮ್ಮ ರಾಜಕೀಯ ಬದುಕಿನಲ್ಲಿ ಇಂಥ ಅಚ್ಚರಿ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದಿರಾ ಗಾಂಧಿ ಅವರಿಗೆ ಕೇವಲ ಆಪ್ತ ಕಾರ್ಯದರ್ಶಿಯಾಗಿದ್ದ ಧವನ್‌ಅವರು ಕೇಂದ್ರ ಸಚಿವರಾದಾಗ ಎಲ್ಲ ಬೆರಗಾಗಿದ್ದರು.ಈಗ ಹೇಳುತ್ತಿರುವುದು ಅವರ ವೈಯಕ್ತಿಕ ಬದುಕಿನ ಅಚ್ಚರಿಯ ಸಂಗತಿ.74ರ `ಹರೆಯ~ದ ಬ್ರಹ್ಮಚಾರಿ ಧವನ್ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದಾರೆ ಎಂದು ಗೊತ್ತಾದಾಗ ಅವರ ಸ್ನೇಹಿತರು, ಬಂಧುಗಳು ಹುಬ್ಬೇರಿಸದೇ ಇರುತ್ತಾರಾ?ಧವನ್ ತಮಗಿಂತಲೂ 14 ವರ್ಷ ಚಿಕ್ಕವರಾದ ಅಚಲಾ ಎಂಬುವರನ್ನು ವರಿಸಿದ್ದಾರೆ. ಗಾಂಧಿ ಕುಟುಂಬದ ಆಪ್ತರಾದ ಧವನ್ ಇದೇ 16ರಂದು ದೆಹಲಿಯ ಪಂಚತಾರಾ ಹೊಟೆಲ್‌ನಲ್ಲಿ ಔತಣ ಕೂಟ ಇಟ್ಟುಕೊಂಡಿದ್ದಾರೆ. ಅಲ್ಲಿ ಎಲ್ಲರಿಗೂ ತಮ್ಮ ಮನದನ್ನೆಯನ್ನು ಪರಿಚಯಿಸಲಿದ್ದಾರೆ.ಏಕಾಂಗಿಯಾಗಿದ್ದ ಧವನ್ ಕಳೆದ ನವೆಂಬರ್‌ನಲ್ಲಿಯೇ ಮದುವೆಯಾಗಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಪಿಸುಮಾತುಗಳು ಕೇಳಿಬರುತ್ತಿವೆ. ಧವನ್ ಮನಸ್ಸು ಕದ್ದ ಅಚಲಾ ಯಾರಿರಬಹುದು ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry