ಧಾರವಾಡದಲ್ಲಿ ಅದಿತಿ ರಂಗಪ್ರವೇಶ ನಾಳೆ

ಶನಿವಾರ, ಜೂಲೈ 20, 2019
27 °C

ಧಾರವಾಡದಲ್ಲಿ ಅದಿತಿ ರಂಗಪ್ರವೇಶ ನಾಳೆ

Published:
Updated:

ಧಾರವಾಡ:  “ಇದೇ 21ರಂದು ಸಂಜೆ 5ಕ್ಕೆ ನಗರದ ಸೃಜನಾ ರಂಗಮಂದಿರದಲ್ಲಿ ಅದಿತಿ ಅನಂತಶಯನ ಕುಲಕರ್ಣಿ ಅವರ ಭರತನಾಟ್ಯ ರಂಗ ಪ್ರವೇಶ ಸಮಾರಂಭವನ್ನು ಆಯೋಜಿಸಲಾಗಿದೆ” ಎಂದು ಅಮಿತ್ ಕುಲಕರ್ಣಿ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ರಾಜಧಾನಿ ಹೆರಿಸಬರ್ಗ್‌ದಲ್ಲಿ ಹುಟ್ಟಿ ಬೆಳೆದ ಈಕೆ 5ನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ಅದಿತಿ ಭಾರತೀಯ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ನಮ್ಮ ಕಲೆ, ಸಂಸ್ಕೃತಿಯನ್ನು ವಿದೇಶಗಳಿಗೆ ಪರಿಚಯಿಸುವಂತಹ ಇಂಥ ನೃತ್ಯಗಳ ಪ್ರದರ್ಶನ ನೀಡುವುದು ಉತ್ಸಾಹ ತಂದಿದೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಕ್ಕ ಸಮ್ಮೇಳನದಲ್ಲಿ ಸನಾದಿ ಅಪ್ಪಣ್ಣ ಚಲನಚಿತ್ರದ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಕಥೆ, ಕವನ ಬರೆಯುವಲ್ಲಿಯೂ ಉತ್ತಮ ಹವ್ಯಾಸ ಬೆಳೆಸಿಕೊಂಡಿದ್ದು, ಜೊತೆಗೆ ವಯೊಲಿನ್ ನುಡಿಸಲು ಕಲಿತಿದ್ದಾಳೆ ಎಂದು ವಿವರಿಸಿದರು.ರಂಗಪ್ರವೇಶ ಸಮಾರಂಭದಲ್ಲಿ ವಿಜಾಪುರ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ.ಮೀನಾ ಚಂದಾವರಕರ ಹಾಗೂ ವಿಶ್ರಾಂತ ಕುಲಪತಿ ಡಾ.ಜೆ.ಎಚ್.ಕುಲಕರ್ಣಿ  ಪಾಲ್ಗೊಳ್ಳುವರು. ರೋಹಿಣಿ ಇಮಾರತಿ, ರಚಿತಾ ನಂಬಿಯಾರ್ ಹಾಜರಿರಲಿದ್ದಾರೆ ಎಂದರು.ಅದಿತಿ, ಸುಚಿತಾ ಕುಲಕರ್ಣಿ, ಅನಂತ ಕುಲಕರ್ಣಿ, ರೋಹಿಣಿ ಇಮಾರತಿ ಗೋಷ್ಠಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry