ಧಾರವಾಡದಲ್ಲಿ ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್ ಆರಂಭ

ಧಾರವಾಡ: 2016ನೇ ಸಾಲಿನ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕಾರವಾರ ವಲಯದ ಸ್ಪರ್ಧೆಗೆ ಶುಕ್ರವಾರ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿರುವ ಸೃಜನ ರಂಗಮಂದಿರದಲ್ಲಿ ಚಾಲನೆ ನೀಡಲಾಯಿತು.
ಇಂದು(ಶುಕ್ರವಾರ) 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿರುವ ಪುರವಾಣಿ ಯಾವುದು? ಅದರ ಈ ಮೊದಲಿನ ಹೆಸರೇನು? ಎಂಬ ಪ್ರಶ್ನೆಯನ್ನು ಸ್ಪರ್ಧಾರ್ಥಿಗಳಿಗೆ ಕೇಳಲಾಯಿತು. ಸರಿ ಉತ್ತರ ನೀಡಿದ ವಿದ್ಯಾರ್ಥಿಗಳಿಂದ ದೀಪ ಬೆಳಗಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲು ಅವಕಾಶ ನೀಡಲಾಯಿತು.
'ಇಂದು ಪ್ರಕಟವಾಗಿರುವ ಪುರವಣಿ ‘ಚಂದನವನ’. ಅದರ ಹಿಂದಿನ ಹೆಸರು ‘ಸಿನಿಮಾ ರಂಜನೆ’' ಎಂದು ಸರಿಯುತ್ತರ ನೀಡಿದ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಕೆಎಲ್ಇ ರಾಜರಾಜೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿನಿ ಚೈತ್ರಾ ಎನ್. ಗೊಲ್ಲರ್ ಅವರು ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಕಾರವಾರ ಜಿಲ್ಲೆಯ 130 ಶಾಲಾ ತಂಡಗಳು ಸ್ಪರ್ಧೆಯಲ್ಲಿ ಭಾಗಿಯಾಗಿವೆ. 780 ವಿದ್ಯಾರ್ಥಿಗಳು ತಮಗೆ ಎದುರಾಗಬಹುದಾದ ಪ್ರಶ್ನೆಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.