ಧಾರವಾಡ: ಯುವ ರಂಗೋತ್ಸವಕ್ಕೆ ಚಾಲನೆ ಇಂದು

7

ಧಾರವಾಡ: ಯುವ ರಂಗೋತ್ಸವಕ್ಕೆ ಚಾಲನೆ ಇಂದು

Published:
Updated:

ಧಾರವಾಡ:  `ನಗರದ ರಂಗಾಯಣದಲ್ಲಿ ನವರಾತ್ರಿ ಅಂಗವಾಗಿ ಇದೇ  15 ರಿಂದ 23ರವರೆಗೆ ಒಂಬತ್ತು ದಿನಗಳ ಕಾಲ ಯುವ ರಂಗೋತ್ಸವ ಕಾರ್ಯಕ್ರಮ ನಡೆಯಲಿದೆ~ ಎಂದು ರಂಗಾಯಣದ ನಿರ್ದೇಶಕ ಸುಭಾಷ ನರೇಂದ್ರ ಭಾನುವಾರ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. `ಕಳೆದ ನಾಲ್ಕು ವರ್ಷದಿಂದ ಕೇವಲ ಧಾರವಾಡದ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿ ದ್ದವು. ಈ ಬಾರಿ ಒಂಬತ್ತು ಕಾಲೇಜುಗಳ ಪೈಕಿ ಹುಬ್ಬಳ್ಳಿಯ ಮೂರು ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಮುಂದಿನ ವರ್ಷ ಧಾರವಾಡ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಕಾಲೇಜುಗಳನ್ನೂಸೇರಿಸಿಕೊಳ್ಳಲಾಗುವುದು~ ಎಂದರು.`15ರಿಂದ ಪ್ರಾರಂಭವಾಗುವ ಯುವ ರಂಗೋತ್ಸವಕ್ಕೆ ಸಂಜೆ 6.30ಕ್ಕೆ ಡಾ.ಪಾಟೀಲ ಪುಟ್ಟಪ್ಪ ಚಾಲನೆ ನೀಡುವರು. ನಂತರ ಇಲ್ಲಿಯ ಜಿಗಳೂರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ `ಮುತ್ತಿನ ಬಲೆ~ ಎಂಬ ನಾಟಕ ಪ್ರದರ್ಶನವಾಗಲಿದೆ. 16 ರಂದು ಜೆಎಸ್‌ಎಸ್ ಬನಶಂಕರಿ ಕಾಲೇಜು ತಂಡದಿಂದ ಸಿ.ಲೀಲಾ ನಿರ್ದೇಶನದ `ಅಧ್ವಾನಪುರ~ ನಾಟಕ,   17 ರಂದು ಮೃತ್ಯುಂಜಯ ಕಾಲೇಜು ತಂಡದಿಂದ `ಗೋಕರ್ಣದ ಗೌಡಶ್ಯಾನಿ~ ನಾಟಕ,  18 ರಂದು ಕಿಟೆಲ್ ಕಲಾ ಕಾಲೇಜು ತಂಡದಿಂದ `ಜನಪದ ರಾಮಾಯಣ~ ನಾಟಕ,  19ರಂದು ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿರುವ ಸರ್ಕಾರಿ ಪಪೂ ಕಾಲೇಜು ತಂಡದಿಂದ `ಮುದ್ದಣ್ಣನ ಪ್ರಮೋಷನ್ ಪ್ರಸಂಗ~ನಾಟಕ,  20ರಂದು ಕೆಎಚ್‌ಕೆ ತಾಂತ್ರಿಕ ಕಾಲೇಜು ತಂಡದಿಂದ `ಸಾಂಬಶಿವ ಪ್ರಹಸನ~ ನಾಟಕ,  21 ರಂದು ಎಸ್‌ವಿಪಿ ಮಹಿಳಾ ವಿದ್ಯಾಪೀಠ ಕಾಲೇಜು ತಂಡದಿಂದ `ನಳಚರಿತ~ ನಾಟಕ,  22ರಂದು `ಮಾಮಾ ಮೂಶಿ~ ನಾಟಕ ಹಾಗೂ  23ರಂದು ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು ತಂಡದಿಂದ `ಪತ್ರಕರ್ತರಿದ್ದಾರೆ~ ನಾಟಕ ಪ್ರದರ್ಶನಗೊಳ್ಳಲಿವೆ~ ಎಂದರು. ರಂಗಾಯಣ ಆಡಳಿತಾಧಿಕಾರಿ ಕೆ.ಎಚ್.ಚೆನ್ನೂರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry