`ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಆತ್ಮಕಥೆಗಳ ಮೆಲುಕು

7

`ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಆತ್ಮಕಥೆಗಳ ಮೆಲುಕು

Published:
Updated:
`ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಆತ್ಮಕಥೆಗಳ ಮೆಲುಕು

ಧಾರವಾಡ : .ಶುಕ್ರವಾರ ಬೆಳಿಗ್ಗೆ ಆರಂಭವಾದ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಗೋಷ್ಠಿಗಳು ಸಾಂಗವಾಗಿ ನಡೆದವು. ಶುಕ್ರವಾರ ಮಧ್ಯಾಹ್ನ ಇಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಭವನದಲ್ಲಿ  ಮಧ್ಯಾಹ್ನ 11:15ಕ್ಕೆ ವಿಮರ್ಶಕ ಎಸ್. ದಿವಾಕರ್ ಅವರ ನಿರ್ದೇಶನದಲ್ಲಿ ಆರಂಭವಾದ 2ನೇ ಗೋಷ್ಠಿ `ಆತ್ಮಕಥೆಯ ಓದು' ವಿನಲ್ಲಿ ಒಟ್ಟು ಮೂರು ಮಂದಿ ತಾವೇ ಬರೆದ ಆತ್ಮಕಥೆಯ ಸ್ವಲ್ಪ ಭಾಗಗಳನ್ನು ಓದಿದರು.ಮೊದಲಿಗೆ ಖ್ಯಾತ ನಾಟಕಕಾರರಾದ ಗಿರೀಶ ಕಾರ್ನಾಡ ಅವರು ತಮ್ಮ ಆಡಾಡತ ಆಯುಷ್ಯ' ಆತ್ಮಕಥೆಯನ್ನು ಓದಿದರು. ಅದರಲ್ಲಿ ಅವರು ಧಾರವಾಡದಲ್ಲಿ 6 ವರ್ಷ ಕಳೆದ ರೀತಿ. ಆ ಸಮಯದಲ್ಲಿ ಅವರು ಹಿರಿಯ ಸಾಹಿತಿಗಳೊಂದಿಗೆ ನಡೆಸಿದ ಮಾತುಕತೆ ಇತ್ಯಾದಿಗಳನ್ನು ಮೆಲುಕು ಹಾಕಿದರು.

ನಂತರ ಕವಯತ್ರಿ ಪ್ರತಿಭಾನಂದಕುಮಾರ್ ಅವರು ತಮ್ಮ `ಅನುದಿನದ ಅಂತರಗಂಗೆ' ಆತ್ಮಕಥೆಯ ಬಗ್ಗೆ ಮಾತನಾಡಿದರು. ತಮಗಿದ್ದ ದಂತದ ವಕ್ರತೆಯಿಂದ ತಾವು ಅನುಭವಿಸಿದ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು. ನಂತರ ಅವರು ಅದನ್ನು ಮೀರಿ ಬೆಳೆದ ಬಗೆಗೆ ವಿವರಿಸಿದರು.ಎ.ಎಂ. ಮದರಿ ಅವರು ತಮ್ಮ `ಗೊಂದಲಿಗ್ಯ' ಎಂಬ ತಮ್ಮ ಆತ್ಮಕಥೆಯ ವಿವರ ನೀಡಿದರು. ಅಲೆಮಾರಿ ಜನಾಂಗವಾದ ಗೊಂದಲಿಗರ ನೋವು ನಲಿವನ್ನು ಇದೇ ವೇಳೆ ಹಂಚಿಕೊಂಡರು.ಒಟ್ಟಾರೆ ತಾವೇ ಬರೆದ ಆತ್ಮಕಥೆಯ ಬಗೆಗೆ ವಿವರಿಸಿದ್ದು ಈ ಗೋಷ್ಠಿಯ ವಿಶೇಷತೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry