`ಧಾರವಾಡ ಸಾಹಿತ್ಯ ಸಂಭ್ರಮ' ಕ್ಕೆ ಚಾಲನೆ

7

`ಧಾರವಾಡ ಸಾಹಿತ್ಯ ಸಂಭ್ರಮ' ಕ್ಕೆ ಚಾಲನೆ

Published:
Updated:
`ಧಾರವಾಡ ಸಾಹಿತ್ಯ ಸಂಭ್ರಮ' ಕ್ಕೆ ಚಾಲನೆ

ಧಾರವಾಡ : ಸಾಕಷ್ಟು ಚರ್ಚೆಗೆ ಗ್ರಾಸವಾದ `ಧಾರವಾಡ ಸಾಹಿತ್ಯ ಸಂಭ್ರಮ'ಕ್ಕೆ ಶುಕ್ರವಾರ ಬೆಳಿಗ್ಗೆ ಇಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಭವನದಲ್ಲಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರ, ಡಾ. ಗಿರಡ್ಡಿ ಗೋವಿಂದರಾಜ, ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಹಾಗೂ ಕವಿ ಚೆನ್ನವೀರಕಣವಿ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಆಶಯ ಭಾಷಣ ಮಾಡಿದ ಜಿ.ಎಸ್. ಆಮೂರ ಅವರು ಪರಭಾಷಿಕರಿಗೆ ಹಾಗೂ ವಿದೇಶಿಯರಿಗೆ ಕನ್ನಡ ಸಾಹಿತ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಅನ್ನಿಸುವಂತಹ ಮಹತ್ವದ ಸಾಹಿತ್ಯವನ್ನು ನಾವು ಇದುವರೆಗೂ ರಚಿಸಿಲ್ಲ ಎಂದು ಹೇಳಿದರು.ಪಾಶ್ಚಾತ್ಯ ಚಿಂತನೆಯನ್ನು ತೆಗೆದುಕೊಂಡು ನಮ್ಮ ಸೃಜನಶೀಲತೆಯನ್ನು ಅದಕ್ಕೆ ಧಾರೆ ಎರೆದದ್ದೆ ಇಲ್ಲಿವರೆಗಿನ ತಲೆಮಾರು ಮಾಡಿದ ಗುರುತರವಾದ ತಪ್ಪು ಎಂದು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

ನಮ್ಮ ಕಾಲದ ಪಿಡುಗುಗಳಿಗೆ ಸ್ಪಂದಿಸುವಂತಹ ಸಾಹಿತ್ಯವನ್ನು ನಾವು ರಚಿಸಬೇಕಿತ್ತು ಎಂದು ಹೇಳಿದ ಅವರು ನಮ್ಮ ಕಾಲದ ಬಿಕ್ಕಟ್ಟುಗಳು, ತಲ್ಲಣಗಳು ಸಮಕಾಲೀನ ಸಾಹಿತ್ಯದಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದರು.

ಮೊದಲ ಗೋಷ್ಠಿಯಾದ `ಕಥೆ ಹೇಳುವ ಕಲೆ' ಇದೀಗ ಮುಗಿದಿದ್ದು, ಇದರಲ್ಲಿ ಶ್ರೀನಿವಾಸ ವೈದ್ಯ, ಮಿತ್ರಾ ವೆಂಕಟ್ರಾಜ್ ಹಾಗೂ ಶ್ರೀಧರ ಬಳಗಾರ ಅವರು ಭಾಗವಹಿಸಿದ್ದರು.

ಶ್ರೀನಿವಾಸ ವೈದ್ಯ ಅವರು ಧಾರವಾಡ ಭಾಷೆಯಲ್ಲಿ ಓದಿದ ಕಥೆಯಂತೂ ಕೇಳುಗರಲ್ಲಿ ಒಂದು ಹಂತದಲ್ಲಿ ನಗುವಿನ ಅಲೆಗಳನ್ನು ಎಬ್ಬಿಸಿದರೆ, ಕಡೆಯಲ್ಲಿ ಕಣ್ಣೀರನ್ನು ತರಿಸಿತು. ಹಾಸ್ಯ, ದುಃಖವು ಇದರಲ್ಲಿ ಸಮ್ಮಿಳಿತಗೊಂಡಿತು.

ಮಿತ್ರಾ ವೆಂಕಟ್ರಾಜ್ ಅವರು ಕುಂದಗನ್ನಡದಲ್ಲಿ ಒಂದು ಘಟನೆಯ ಮೂರು ಆಯಾಮ ಇರುವ ಕಥೆಯನ್ನು ಓದಿದರು. ಆದರೆ ಶ್ರೀಧರ ಬಳಗಾರ ಅವರು ಮಾತ್ರ ತಮ್ಮ ಕಥೆಯನ್ನು ಬರೇ ಓದದೇ ಅದನ್ನು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry