`ಧಾರ್ಮಿಕ ಆಚರಣೆಗೆ ರಾಜಕೀಯ ಬೇಡ'

7

`ಧಾರ್ಮಿಕ ಆಚರಣೆಗೆ ರಾಜಕೀಯ ಬೇಡ'

Published:
Updated:

ವೈಟ್‌ಫೀಲ್ಡ್: ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗೆ ರಾಜಕೀಯ ಪ್ರೇರಣೆ ಅನಗತ್ಯ ಎಂದು ಆನೇಕಲ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಜಯಣ್ಣ ಎಂದರು.ಇಲ್ಲಿಗೆ ಸಮೀಪದ ಸರ್ಜಾಪುರ ರಸ್ತೆಯ ದೊಮ್ಮಸಂದ್ರ ಗ್ರಾಮದಲ್ಲಿ ಹಜರತ್ ಬಾಬು ಷಾವಲಿ ಶನಿವಾರ ಏರ್ಪಡಿಸಿದ್ದ ಉರೂಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಸಂಪ್ರದಾಯ, ಆಚರಣೆ, ವೈವಿಧ್ಯ ಇದ್ದರೂ ಸಾಮಾಜಿಕ ಚಿಂತನೆ ಅನಿವಾರ್ಯ ಎಂದರು.ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಧನರಾಜ್, ಕೆಪಿಸಿಸಿ ಸದಸ್ಯ ಬಿ.ಶಿವಣ್ಣ, ಇರ್ಷಾದ್ ಅಹ್ಮದ್, ಬಾಬು, ಬಾಷಾ ಖಾನ್, ಜಾವೆದ್ ಖಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry