ಶುಕ್ರವಾರ, ಜೂನ್ 18, 2021
28 °C

ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರವಾರ (ಕವಿತಾಳ): ಸಮೀಪದ ನವಲಕಲ್ ಬೃಹನ್ಮಠದಲ್ಲಿ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 15ನೇ ಜಾತ್ರಾ ಮಹೋತ್ಸವ ಮತ್ತು ಅಭಿನವ ಸೋಮನಾಥ ಶಿವಾಚಾರ್ಯರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಆಧುನಿಕ ಯುಗದಲ್ಲಿ ಸೌಲಭ್ಯಗಳು ಹೆಚ್ಚುತ್ತಿದ್ದು ಧಾರ್ಮಿಕ ಮನೋಭಾವ ಕ್ಷೀಣಿಸುತ್ತಿದೆ ಎಂದರು.ಮಾನಸಿಕ ನೆಮ್ಮದಿಗೆ ಮಠ ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಮತ್ತು ಡಾ.ರಾಮಚಂದ್ರಪ್ಪ ಗಣಪೂರು ಮಾತನಾಡಿದರು. ಕೊಡೇಕಲ್‌ನ ಶಿವಕುಮಾರ ಸ್ವಾಮೀಜಿ, ರಾಯಚೂರು ಸೋಮವಾರಪೇಟೆಯ ರಾಚೋಟಿ ವೀರಶಿವಾಚಾರ್ಯರು, ಅಮರೇಶ ದೇವರು ಕುಂದರಗಿ, ಹೊಸಪೇಟೆಯ ವಿರುಪಾಕ್ಷಿ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯರು ವೇದಿಕೆ ಮೇಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.