`ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ಶಾಂತಿ'

7
ಶ್ರಾವಣ ಮಾಸದ ವಿಶೇಷ ಪೂಜೆ

`ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ಶಾಂತಿ'

Published:
Updated:

ಹಾವೇರಿ: ಇಲ್ಲಿನ ಬಸವೇಶ್ವರ ನಗರದಲ್ಲಿರುವ ಗಜಾನನ ಹಾಗೂ ಆಂಜನೇಯ ದೇವರುಗಳಿಗೆ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು.ಬೆಳಿಗ್ಗೆ ಗಜಾನನ ಮತ್ತುಆಂಜನೇಯ ದೇವರುಗಳ ರುದ್ರಾಭಿಷೇಕ ಹಾಗೂ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಸರ್ವ ಧರ್ಮಿಯರು ತನು, ಮನ, ಧನದಿಂದ ಪಾಲ್ಗೊಂಡಿದ್ದರು. ಅಲ್ಲದೇ ಮಹಿಳೆಯರು ಮಂಗಳಗೌರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹರಸೂರು ಬಣ್ಣದ ಮಠದ ಅಭಿನವ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಪೂಜೆ, ಪುನಸ್ಕಾರಗಳಂತಹ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಬಿಡವಿಲ್ಲದ ಸಮಯದಲ್ಲಿಯೂ ಪೂಜೆಗಾಗಿ ಸ್ವಲ್ಪ ಸಮಯ ಮೀಸಲಿಡುವಂತೆ ಸಲಹೆ ಮಾಡಿದರು.ನಗರದ ಭಕ್ತಾಧಿಗಳು ಗಜಾನನ ಮತ್ತುಆಂಜನೇಯ ದೇವರ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಸಮಾರಂಭದಲ್ಲಿ ದೇವಸ್ಥಾನದ  ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ.ಎಂ.ಪಟ್ಟಣಶೆಟ್ಟಿ, ಕಾರ್ಯದರ್ಶಿ, ಖಜಾಂಜಿ ಇಟಗಿ ಹಾಗೂ ಸದಸ್ಯರು, ಮುಖಂಡರಾದ ಆರ್.ಜಿ.ರೋಣಿಮಠ, ಆರ್.ಜಿ.ಕುಲಕರ್ಣಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಪಲ್ಲಕ್ಕಿ ಮಹೋತ್ಸವ

ಶಿಗ್ಗಾವಿ:
ತಾಲ್ಲೂಕಿನ ಬಂಕಾಪುರದ ಮಂಜುನಾಥ ನಗರದಲ್ಲಿ ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ  ಮಂಜುನಾಥ ಸ್ವಾಮಿ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.ಪಲ್ಲಕ್ಕಿ ಮೆರವಣಿಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವಾದ್ಯ ವೈಭವಗಳೊಂದಿಗೆ ನಡೆಯಿತು. ಮಹಿಳೆಯರು, ಮಕ್ಕಳು ಮಂಜುನಾಥ ಸ್ವಾಮಿ ಮೂರ್ತಿಗೆ ಹೂ, ಹಣ್ಣು, ಕಾಯಿಗಳನ್ನು ಭಕ್ತಿಯಿಂದ ಸಮರ್ಪಿಸಿದರು.ಅರ್ಚಕ ಬಸವರಾಜ ಬೆಟಗೇರಿ ನೇತೃತ್ವ ವಹಿಸಿದ್ದರು. ಪುರಸಭೆ ಸದಸ್ಯೆ ಸುನಿತಾ ಬೆಟಗೇರಿ, ಶ್ರೀಮಂಜುನಾಥ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಾಲತೇಶ ಗೌಡರ, ಉಪಾಧ್ಯಕ್ಷ ಗಂಗಾಧರ ಗುಡಿಮನಿ, ಕಾರ್ಯದರ್ಶಿ ಶಿವಾನಂದ ಗೌಡರ, ಡಾ.ಸಂತೋಷ ಗುಡಿಮನಿ, ನಾಗರಾಜ ಗುಡಿಮನಿ, ಎಂ.ಎಲ್. ಗುಡಿಮನಿ, ಎಂ.ಎಫ್.ಗುಡಿಮನಿ, ಬಿ.ಎನ್.ಗೌಡರ, ವಿರುಪ್ಪಣ್ಣ ಗುಡಿಮನಿ, ಮಾಲತೇಶ ನರಗುಂದ, ಕಿರಣ ಗುಡಿಮನಿ, ಚಿಕ್ಕರಾಜ ಗುಡಿಮನಿ  ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅಕ್ಕಿಆಲೂರ ವರದಿ

`ಸಂತರು, ಶರಣರು ಈ ನಾಡಿನ ಹಿತಕ್ಕಾಗಿ ಸನ್ಮಾರ್ಗಗಳನ್ನು ತಮ್ಮ ಬೋಧನೆಯಲ್ಲಿ ನಮಗೆಲ್ಲ ನೀಡಿದ್ದಾರೆ. ಹಿರಿಯರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿಯೇ ನಾವಿಂದು ಮುನ್ನೆಡೆಯಬೇಕಿದೆ. ಎಲ್ಲರೊಂದಿಗೆ ಒಂದಾಗಿ ಸರ್ವರ ಹಿತ ಬಯಸುವುದೇ ನಿಜವಾದ ಮಾನವ ಧರ್ಮ' ಎಂದು ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು.ಇಲ್ಲಿಯ ಕೆರೆ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.`ನಮ್ಮ ಸಂಸ್ಕೃತಿ-ಸಂಸ್ಕಾರದ ಬಗೆಗೆ ತಿಳುವಳಿಕೆ ಇಲ್ಲದ ಮಕ್ಕಳು ಪಾಶ್ಚಿಮಾತ್ಯ ನಡೆನುಡಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ಅಂಧಾನುಕರಣೆ, ಸ್ವೇಚ್ಛಾಚಾರದ ಬದುಕು ನಾಗರಿಕತೆಯ ಅವನತಿಗೆ ಕಾರಣವಾಗುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಭಾವನಾತ್ಮಕ ಜೀವನ ಕಟ್ಟಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು' ಎಂದು ಕರೆ ನೀಡಿದರು.ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇದೇ ವೇಳೆ ನೆರವೇರಿದವು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry