ಗುರುವಾರ , ಏಪ್ರಿಲ್ 22, 2021
29 °C

ಧಾರ್ಮಿಕ ಕೇಂದ್ರಗಳು ವಿವರ ಕೊಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2005 ರಲ್ಲಿ ಒದಗಿಸಲಾದ ಮಾಹಿತಿ ಹಕ್ಕು ಕಾಯಿದೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಪಾರದರ್ಶಕತೆಗೆ ಕಾರಣವಾಗಿದ್ದು ಹಲವು ಹಗರಣ ವಿವರಗಳು ಜನತೆಗೆ ಲಭ್ಯವಾಗಿದೆ.ವಕ್ಫ್ ಆಸ್ತಿ ವ್ಯವಹಾರಗಳ, ಚರ್ಚ್ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಒತ್ತಾಯದ ವರದಿ, ಬಿಡದಿ/ಮೈಸೂರಲ್ಲಿ ಧಾರ್ಮಿಕ ಕೇಂದ್ರಗಳಿಂದ ನಿಯಮ ಉಲ್ಲಂಘನೆ ವರದಿಯನ್ನು ಪರಿಗಣಿಸಿ ಎಲ್ಲಾ ಧಾರ್ಮಿಕ ಕೇಂದ್ರಗಳು ಮಾಹಿತಿ ಹಕ್ಕು ಕಾಯಿದೆಯನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಳ್ಳುವುದನ್ನು ಪರಿಗಣಿಸಬೇಕಾಗಿದೆ. ಪ್ರಸ್ತುತ ಸರ್ಕಾರಿ ಕಚೇರಿ, ಸರಕಾರದಿಂದ ಆರ್ಥಿಕ ಸಹಾಯವನ್ನು ಪಡಕೊಂಡ ಸಂಸ್ಥೆಗಳಿಗೆ ಕಾಯಿದೆ ಅನ್ವಯವಾಗುತ್ತಿದೆ. ಆಯಾ ಧಾರ್ಮಿಕ ಭಾವನೆಯ ಆಸ್ತಿಕ ಬಾಂಧವರಿಗೆ ಸತ್ಯ, ಧರ್ಮ, ತ್ಯಾಗ, ಸಹನೆ, ನೀತಿ, ಸರಳ ಜೀವನ, ಜೀವಾತ್ಮ-ಪರಮಾತ್ಮ, ಮಾನವ ಜೀವನದ ನಶ್ವರತೆಯನ್ನು ಬೋಧಿಸುವವರಿಂದ ಸ್ವಯಂ ಪಾಲನೆಯಾಗುತ್ತದೆಯೇ?ಈ ಅಂಶ ಖಚಿತವಾಗುವುದು ಇಂದು ಅವಶ್ಯವಾಗಿದೆ. ವೈರಾಗಿಗಳ ಪೂರ್ವಾಶ್ರಮದ ಬಂಧುಗಳು ಭಕ್ತಾದಿಗಳ ಧಾರ್ಮಿಕ ಹಿತಾಸಕ್ತಿಯನ್ನು ಧಿಕ್ಕರಿಸಿ ಸ್ವಹಿತಾಸಕ್ತಿಯನ್ನು ವೃದ್ಧಿಸುವುದು ಖಂಡನೀಯವಾಗಿದೆ. ಪೂಜೆ, ಪುನಸ್ಕಾರ, ಕನಕಾಭರಣ, ವೈಭವದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಚುರಪಡಿಸುವ ಧಾರ್ಮಿಕ ಕೇಂದ್ರಗಳು ಪಾರದರ್ಶಕತೆಗೆ, ಸಂಪನ್ಮೂಲಗಳ ಸಾರ್ಥಕ ಬಳಕೆಗಾಗಿ ಮಾಹಿತಿ ಹಕ್ಕು ಕಾಯಿದೆಯನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿ, ಸಂಪನ್ಮೂಲ ಸಂಗ್ರಹ, ಆಯ-ವ್ಯಯ, ಸ್ಥಿರ-ಚರ ಸೊತ್ತುಗಳು, ಬರಬೇಕಾದ ಬಾಕಿ, ಬಾಡಿಗೆ ವಿವರಗಳು, ಸಾರ್ವಜನಿಕ ಒಳಿತಿಗೆ ವಿನಿಯೋಗಿಸಿದ ಮೊತ್ತ, ಫಲಾನುಭವಿಗಳ ವಿವರಗಳನ್ನು ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಿ ಜನತೆಗೆ ಒದಗಿಸಲು ಕ್ರಿಯಾಶೀಲವಾಗಬಹುದಲ್ಲವೇ?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.