ಶುಕ್ರವಾರ, ನವೆಂಬರ್ 15, 2019
21 °C

ಧಾರ್ಮಿಕ ಸಂಸ್ಥೆಗಳಿಗೆ ರೂ 130 ಕೋಟಿ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಯಾವುದೇ ಮಠಗಳಿಗೆ ಹಣ ನೀಡಿಲ್ಲ. ಆದರೆ, ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಧಾರ್ಮಿಕ ಸಂಸ್ಥೆಗಳಿಗೆ ರೂ130 ಕೋಟಿಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ.ಹಿಂದುಳಿದ ವರ್ಗಗಳ ಧಾರ್ಮಿಕ ಹಾಗೂ ಇತರೆ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ರೂ 75 ಕೋಟಿ  ಪ್ರಕಟಿಸಲಾಗಿದೆ. ಇದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಧಾರ್ಮಿಕ, ಇತರೆ ಸಂಘ ಸಂಸ್ಥೆಗಳಿಗೆ ರೂ 50 ಕೋಟಿ ರೂಪಾಯಿ ಒದಗಿಸಲಾಗಿದೆ.ಗುಲ್ಬರ್ಗದಲ್ಲಿರುವ ಸಿದ್ಧಾರ್ಥ ವಿಹಾರಕ್ಕೆ ರೂ 5 ಕೋಟಿ ನೀಡಲಾಗಿದೆ. ಬಂಜಾರಾ ಜನಾಂಗದ ಕುಲಗುರು ಸೇವಾಲಾಲ್ ಅವರ ಹುಟ್ಟೂರು ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ರೂ 2 ಕೋಟಿ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ 1 ಕೋಟಿ  ಪ್ರಕಟಿಸಲಾಗಿದೆ.

ಪ್ರತಿಕ್ರಿಯಿಸಿ (+)