ಭಾನುವಾರ, ಏಪ್ರಿಲ್ 11, 2021
32 °C

ಧಾರ್ಮಿಕ ಸ್ಥಳ ತೆರವು ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಲ್ಲಿನ ಧಾರ್ಮಿಕ ಸ್ಥಳದಲ್ಲಿ ಇರುವ ಕಟ್ಟಡಗಳನ್ನು ತೆರವು ಮಾಡಬಾರದು ಎಂದು ಆಗ್ರಹಿಸಿ ಬಸವಕಲ್ಯಾಣ ಮುಸ್ಲಿಂ ಸೋಷಿಯಲ್ ಫೋರಂ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು.ದೇಶದಲ್ಲಿ 1947ರ ನಂತರ ನಿರ್ಮಿಸಲಾಗಿರುವ ಮಂದಿರ, ಮಸೀದಿ ಸೇರಿದಂತೆ ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ಬಸವಕಲ್ಯಾಣದಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮಸೀದಿ ಕೆಡವಲಾಗುತ್ತಿದೆ. ದಾಖಲೆಗಳನ್ನು ಹೊಂದಿದ, 400 ವರ್ಷಗಳಷ್ಟು ಹಳೆಯದಾದ ಮಸೀದಿಗಳನ್ನು ಕೆಡವಲಾಗುತ್ತಿದೆ ಎಂದು ಆಪಾದಿಸಿದರು.ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಧಿಕೃತ ಇರುವ ಮಸೀದಿಗಳನ್ನು ಕೆಡವಲಾಗಿದೆ. ಆದ್ದರಿಂದ ಕಾನೂನು ಉಲ್ಲಂಘಿ ಸಿ ಕಟ್ಟಡಗಳನ್ನು ತೆರವು ಮಾಡಿರುವ ಸಹಾಯಕ ಆಯುಕ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಜುಲ್ಫೇಕಾರ್ ಹಾಸ್ಮಿ, ನಗರಸಭೆ ಉಪಾಧ್ಯಕ್ಷ ಮಹಮ್ಮದ್ ಜಾವೀದ್, ಬಸವಕಲ್ಯಾಣ ಮುಸ್ಲಿಂ ಸೋಶಿಯಲ್ ಫೋರಂ ಅಧ್ಯಕ್ಷ ಇಕ್ರಾಮುದ್ದೀನ್ ಖಾದಿವಾಲೆ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಾರುತಿ ಬೌದ್ಧೆ, ಕ್ರಿಶ್ಚಿಯನ್ ಹಿತರಕ್ಷಣಾ ಸಮಿತಿಯ ಸುನೀಲ ಸಾಗರ, ಪ್ರಮುಖರಾದ ಜೊಸೆಫ್ ಕೊಡ್ಡಕರ್, ಮಹಮ್ಮದ್ ಗಫಾರ್ ಪೆಶ್ಮಾಮ್, ಶಬ್ಬೀರ್‌ಮಿಯ್ಯ, ಮನ್ಸೂರ್ ಖಾದ್ರಿ, ನಬಿ ಖುರೈಶಿ, ಜಮೀಲ್ ದಫ್ತೇದಾರ್, ಅತಿಕ್ ಅಹಮ್ಮದ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.