ಧೂತ್ ಸಹೋದರರ ವಿಚಾರಣೆ

7

ಧೂತ್ ಸಹೋದರರ ವಿಚಾರಣೆ

Published:
Updated:

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ವಿಡಿಯೊಕಾನ್ ಗುಂಪಿನ ಅಧ್ಯಕ್ಷ ವೇಣುಗೋಪಾಲ್ ಧೂತ್ ಹಾಗೂ ಅವರ ಸಹೋದರ ರಾಜ್ಯಸಭಾ ಸದಸ್ಯ ರಾಜಕುಮಾರ್ ಧೂತ್ ಅವರನ್ನು ಸಿಬಿಐ ಸೋಮವಾರ ಪ್ರಶ್ನಿಸಿತು.ಮಧ್ಯಾಹ್ನ ಇಬ್ಬರನ್ನೂ ಇಲ್ಲಿನ ಸಿಬಿಐ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಕನಿಷ್ಠ ಏಳು ಗಂಟೆಗಳ ಕಾಲ ಹಗರಣಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ. ತಮ್ಮ ಕಂಪೆನಿಯ ಷೇರು ಬಂಡವಾಳವನ್ನು ಏಕಾಏಕಿ ಒಂದು ಲಕ್ಷ ರೂ.ನಿಂದ 150 ಕೋಟಿ ರೂ.ಗೆ ಪರಿವರ್ತಿಸಿದ ಬಗ್ಗೆ ಅಧಿಕಾರಿಗಳು ಇವರಿಂದ ವಿವರಣೆ ಪಡೆದರು ಎನ್ನಲಾಗಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry